ಪ್ರಾಚಿ ಚೌಧರಿ | Photo Credit : X 

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಮಹಿಳೆಯರ 400 ಮೀಟರ್ ಓಟದಲ್ಲಿ ಭಾರತದ ಪ್ರಾಚಿ ಚೌಧರಿ ಶನಿವಾರ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಅವರು 53.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ನಿರೀಕ್ಷೆಯಂತೆಯೇ ಬಹರೈನ್‌ನ್‌ನ ಸಲ್ವಾ ನಾಸಿರ್ 49.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, 52.38 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದ ಇರಾನ್‌ನ ಝಹ್ರಾ ಝರೇಯಿ ಮನೌಜಾನ್ ಬೆಳ್ಳಿ ಪಡೆದರು.

ಕಣದಲ್ಲಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ಕಿರಣ್ ಪಹಲ್ 53.41 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಐದನೇ ಸ್ಥಾನ ಪಡೆದರು.

ಈ ಗೆಲುವಿನಿಂದ ಉತ್ಸಾಹಗೊಂಡಿರುವ ಪ್ರಾಚಿ ಈಗ 4x400 ಮೀಟರ್ ರಿಲೇ ಮೇಲೆ ಚಿತ್ತ ನೆಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor