ಜನ್ನಿಕ್ ಸಿನ್ನರ್ | Photo Credit : PTI 

ಹೊಸದಿಲ್ಲಿ, ಸೆ.25: ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಇಟಲಿ ಆಟಗಾರ ಜನ್ನಿಕ್ ಸಿನ್ನರ್ ಹೇಳಿದ್ದಾರೆ. ಹೀಗಾಗಿ ವೃತ್ತಿಪರ ಟೆನಿಸ್ಗೆ ಸಿನ್ನರ್ ಮರಳಿಕೆಯು ಇನ್ನಷ್ಟು ವಿಳಂಬವಾಗಲಿದೆ.

ಜುಲೈನಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ನಂತರ 25ರ ವಯಸ್ಸಿನ ಸಿನ್ನರ್ ಯಾವುದೇ ಪಂದ್ಯಗಳನ್ನು ಆಡಿಲ್ಲ. ಮೊಣಕಾಲು ನೋವಿನಿಂದಾಗಿ ಹಲವಾರು ಮಾಸ್ಟರ್ಸ್ ಸ್ಪರ್ಧೆಗಳು ಹಾಗೂ ಯುಎಸ್ ಓಪನ್‌ ನಿಂದ ವಂಚಿತರಾಗಿದ್ದರು.

‘‘ಈ ವರ್ಷ ಬೀಜಿಂಗ್ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಟಿಸಲು ನನಗೆ ತುಂಬಾ ಬೇಸರವಾಗುತ್ತಿದೆ. ನಾನು ಬಯಸಿದಷ್ಟು ಮೊಣಕಾಲು ಗುಣಮುಖವಾಗಿಲ್ಲ. ಸ್ಪರ್ಧೆಗೆ ಇನ್ನೂ ಸಿದ್ಧವಾಗಿಲ್ಲ. ಆದಷ್ಟು ಬೇಗನೆ ಟೆನಿಸ್ ಅಂಗಣಕ್ಕೆ ಮರಳಲು ಶತಪ್ರಯತ್ನ ಮಾಡುತ್ತೇನೆ’’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಸಿನ್ನರ್ ಹೇಳಿದ್ದಾರೆ.

ಸಿನ್ನರ್ ಚೀನಾ ಓಪನ್ನ ಹಾಲಿ ಚಾಂಪಿಯನ್ ಆಗಿದ್ದು, ಫೈನಲ್ನಲ್ಲಿ ಅಮೆರಿಕದ ಲರ್ನರ್ ಟಿಯೆನ್ರನ್ನು ನೇರ ಸೆಟ್ಗಳಿಂದ ಮಣಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor