ಬಾರ್ಡರ್-ಗವಾಸ್ಕರ್ ಟ್ರೋಫಿಗಿಂತ ಮೊದಲು ಆಸ್ಟ್ರೇಲಿಯ ಅಭ್ಯಾಸ ಪಂದ್ಯ ಆಡುವುದಿಲ್ಲ: ಮೆಕ್‌ಡೊನಾಲ್ಡ್

Update: 2026-08-05 21:29 IST

ಆ್ಯಂಡ್ರೆ ಮೆಕ್‌ಡೊನಾಲ್ಡ್ | Photo Credit : AP

ಮೆಲ್ಬರ್ನ್, ಆ.5: ಮುಂದಿನ ವರ್ಷ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ವಿರುದ್ಧ ನಡೆಯಲಿರುವ ವಿದೇಶಿ ಟೆಸ್ಟ್ ಸರಣಿಗಿಂತ ಮೊದಲು ತನ್ನ ತಂಡವು ಯಾವುದೇ ಅಭ್ಯಾಸ ಪಂದ್ಯವನ್ನು ಆಡುವುದಿಲ್ಲ ಎಂದು ಆಸ್ಟ್ರೇಲಿಯದ ಮುಖ್ಯ ಕೋಚ್ ಆ್ಯಂಡ್ರೆ ಮೆಕ್‌ಡೊನಾಲ್ಡ್ ಬಹಿರಂಗಪಡಿಸಿದರು.

ಅಭ್ಯಾಸ ಪಂದ್ಯಗಳಿಗಿಂತ ಉಪ ಖಂಡದ ರೀತಿಯ ವಾತಾವರಣದಲ್ಲಿ ಕಿರು ಪೂರ್ವ ಸಿದ್ದತಾ ಶಿಬಿರ ನಡೆಸುವುದು ಅತ್ಯಂತ ಉಪಯುಕ್ತವಾಗಿದೆ ಎಂದು ಮೆಕ್‌ಡೊನಾಲ್ಡ್ ಹೇಳಿದರು.

ಬಹು ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯು ಮುಂದಿನ ವರ್ಷದ ಜನವರಿ 21ರಂದು ನಾಗ್ಪುರದಲ್ಲಿ ಆರಂಭವಾಗಲಿದೆ. ತಿಂಗಳ ಕಾಲ ನಡೆಯಲಿರುವ ಟೂರ್ನಿಯು ಚೆನ್ನೈ, ಗುವಾಹಟಿ, ರಾಂಚಿ ಹಾಗೂ ಅಹ್ಮದಾಬಾದ್‌ನಲ್ಲೂ ನಡೆಯಲಿದೆ.

2023ರಲ್ಲಿ ಭಾರತಕ್ಕೆ ಟೆಸ್ಟ್ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯ ತಂಡವು ಸರಣಿಗೆ ತಯಾರಿ ನಡೆಸಲು ಬೆಂಗಳೂರು ಸಮೀಪದ ಆಲೂರ್‌ನಲ್ಲಿ ಶಿಬಿರ ನಡೆಸಿತ್ತು.

2004-05ರ ಋತುವಿನ ನಂತರ ಆಸ್ಟ್ರೇಲಿಯ ತಂಡವು ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News