ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿ| ಹಿಂದೆ ಸರಿದ ಕಾರ್ಲೊಸ್ ಅಲ್ಕರಾಝ್

Update: 2026-08-05 19:36 IST

ಕಾರ್ಲೊಸ್ ಅಲ್ಕರಾಝ್ | Photo Credit : PTI 

ಸಿನ್ಸಿನಾಟಿ, ಆ.5: ಏಪ್ರಿಲ್‌ನಿಂದ ಬಲ ಮಣಿಕಟ್ಟು ಗಾಯದಿಂದ ಬಳಲುತ್ತಿರುವ ಸ್ಪೇನ್‌ನ ಯುವ ಟೆನಿಸ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ವಿಶ್ವದ 2ನೇ ರ್ಯಾಂಕಿನ ಆಟಗಾರ ಅಲ್ಕರಾಝ್ ಅವರು ಹಾರ್ಡ್ ಕೋರ್ಟ್ ಟೂರ್ನಮೆಂಟ್‌ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಈ ಟೂರ್ನಿಯು ಯು.ಎಸ್. ಓಪನ್‌ಗೆ ಪ್ರಮುಖ ಪೂರ್ವ ತಯಾರಿಯಾಗಿತ್ತು.

‘‘ಆದಷ್ಟು ಬೇಗನೆ ಟೂರ್ನಮೆಂಟ್‌ಗಳಲ್ಲಿ ಆಡಲು ಟೆನಿಸ್ ಅಂಗಣಕ್ಕೆ ಮರಳಲು ಕಾರ್ಲೊಸ್ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಮಗೆ ಗೊತ್ತಿದೆ. ಅವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾವು ಆಶಿಸುತ್ತೇವೆ. ಭವಿಷ್ಯದಲ್ಲಿ ಸಿನ್ಸಿನಾಟಿಗೆ ಸ್ವಾಗತಿಸುವುದನ್ನು ಎದುರು ನೋಡುತ್ತಿದ್ದೇವೆ’’ ಎಂದು ಟೂರ್ನಮೆಂಟ್‌ನ ನಿರ್ದೇಶಕ ಬಾಬ್ ಮೊರನ್ ಹೇಳಿದ್ದಾರೆ.

ಅಲ್ಕರಾಝ್ ಅವರು ಬಾರ್ಸಿಲೋನ ಓಪನ್ ಟೂರ್ನಿಯಲ್ಲಿ ಕೊನೆಯ ಬಾರಿ ಆಡಿದ್ದರು. ಆ ನಂತರ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಸಹಿತ ಎಲ್ಲ ಗ್ರ್ಯಾಸ್ ಕೋರ್ಟ್ ಋತುವಿನಿಂದ ವಂಚಿತರಾಗಿದ್ದರು.

ಅಲ್ಕರಾಝ್ ಹಾಲಿ ಚಾಂಪಿಯನ್ ಆಗಿ ಯು.ಎಸ್. ಓಪನ್‌ಗೆ ಪ್ರವೇಶಿಸಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಫೋಟೊಗಳು ಹಾಗೂ ವೀಡಿಯೊಗಳಲ್ಲಿ ಏಳು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಅಲ್ಕರಾಝ್, ಪ್ರಾಕ್ಟೀಸ್ ಅಂಗಳದಲ್ಲಿ ಇರುವುದು ಕಂಡುಬಂದಿದೆ. ಹೀಗಾಗಿ ಅವರು ಆಗಸ್ಟ್ 11ರಿಂದ ಆರಂಭವಾಗುವ ಸಿನ್ಸಿನಾಟಿ ಟೂರ್ನಿಯಲ್ಲಿ ಆಡಲು ಸಜ್ಜಾಗಿರುವಂತೆ ಕಂಡುಬಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News