ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ಗೆ ಚಾಲನೆ : 147 ದೇಶಗಳ 1,800ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ
Update: 2026-08-05 19:43 IST
Photo Credit : worldathletics.org
ಒರೆಗಾನ್, ಆ.5: ಯುಜೀನ್ ನಗರದಲ್ಲಿ ಬುಧವಾರದಿಂದ(ಆ.5)ರವಿವಾರ(ಆ.9)ತನಕ ನಡೆಯಲಿರುವ 2026ರ ಆವೃತ್ತಿಯ ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ 147 ದೇಶಗಳ 1,800ಕ್ಕೂ ಅಧಿಕ ಅತ್ಲೀಟ್‌ಗಳು ಭಾಗವಹಿಸಲಿದ್ದಾರೆ.
ಹೇವಾರ್ಡ್ ಫೀಲ್ಡ್‌ನಲ್ಲಿ ಒಟ್ಟು 46 ಚಿನ್ನದ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ. 22 ಪುರುಷರ ಇವೆಂಟ್‌ಗಳು ಹಾಗೂ 22 ಮಹಿಳೆಯರ ಇವೆಂಟ್‌ಗಳು ಹಾಗೂ ಎರಡು ಮಿಕ್ಸೆಡ್ ರಿಲೇಗಳು ನಡೆಯಲಿವೆ.
ಮೊದಲ ದಿನವಾದ ಬುಧವಾರ ನಾಲ್ಕು ಪದಕಗಳು ನಿರ್ಧಾರವಾಗಲಿದೆ.