×
Ad

Bangladesh ಅನುಪಸ್ಥಿತಿ ಕ್ರಿಕೆಟ್‌ ನ ದುಃಖದ ಕ್ಷಣ: ಆಟಗಾರರ ಸಂಘ

Update: 2026-01-25 23:35 IST

Photo Credit : PTI

ಮುಂಬೈ, ಜ. 25: ಮುಂದಿನ ತಿಂಗಳು ನಡೆಯಲಿರುವ ಟ್ವೆಂಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡದ ಅನುಪಸ್ಥಿತಿಯು ಕ್ರಿಕೆಟ್‌ನ ದುಃಖದ ಗಳಿಗೆಯಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟಿಗರ ಅಸೋಸಿಯೇಶನ್ ರವಿವಾರ ಹೇಳಿದೆ. ಈ ವಿದ್ಯಮಾನವು ಕ್ರೀಡೆಯನ್ನು ವಿಭಜಿಸುವ ಬಗ್ಗೆ ಯೋಚಿಸದೆ ಒಗ್ಗೂಡಿಸುವುದರತ್ತ ಕೆಲಸ ಮಾಡುವುದಕ್ಕೆ ಸಂಬಂಧಪಟ್ಟವರಿಗೆ ಕರೆಗಂಟೆಯಾಗಬೇಕು ಎಂದು ಅದು ಹೇಳಿದೆ.

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ಪಂದ್ಯಾವಳಿಯಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದೆ. ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕು ಎಂಬುದಾಗಿ ಅದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯನ್ನು ಕೋರಿತ್ತು. ಆದರೆ, ಈ ಕೋರಿಕೆಯನ್ನು ಐಸಿಸಿ ತಿರಸ್ಕರಿಸಿದೆ ಹಾಗೂ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಸ್ಥಾನದಲ್ಲಿ ಆಡಲು ಸ್ಕಾಟ್ಲ್ಯಾಂಡ್‌ಗೆ ಆಹ್ವಾನ ನೀಡಿದೆ.

‘‘ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಬಂದಿರುವುದು ಹಾಗೂ ಕ್ರಿಕೆಟ್‌ನ ಜಾಗತಿಕ ಕೂಟದಲ್ಲಿ ಉನ್ನತ ಕ್ರಿಕೆಟ್ ದೇಶವೊಂದರ ಅನುಪಸ್ಥಿತಿಯು ನಮ್ಮ ಕ್ರೀಡೆ ಹಾಗೂ ಬಾಂಗ್ಲಾದೇಶದ ಆಟಗಾರರು ಮತ್ತು ಅಭಿಮಾನಿಗಳಿಗೆ ದುಃಖದ ಗಳಿಗೆಯಾಗಿದೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ’’ ಎಂದು ವಿಶ್ವ ಕ್ರಿಕೆಟಿಗರ ಅಸೋಸಿಯೇಶನ್ (ಡಬ್ಲ್ಯುಸಿಎ)ನ ಮುಖ್ಯ ಕಾರ್ಯನಿರ್ವಾಹಕ ಟಾಮ್ ಮೊಫತ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮೂರನೇ ಶ್ರೇಯಾಂಕದ ಅಮೆರಿಕದ ಕೋಕೊ ಗೌಫ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಅವರು ಝೆಕ್‌ನ ಕರೊಲಿನಾ ಮುಚೋವರನ್ನು 6–1, 3–6, 6–3 ಸೆಟ್‌ಗಳಿಂದ ಮಣಿಸಿದರು.

ಎರಡು ಬಾರಿಯ ಗ್ರ್ಯಾನ್ಸ್‌ಲ್ಯಾಮ್ ಚಾಂಪಿಯನ್, 21 ವರ್ಷದ ಗೌಫ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್‌ಗಿಂತ ಮುಂದೆ ಹೋಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News