WPL | RCBಗೆ ಮೊದಲ ಸೋಲು
Update: 2026-01-25 07:20 IST
PC: x.com/sportstarweb
ವಡೋದರ, ಜ. 24: ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿ ಬೀಗುತ್ತಿದ್ದ ಆರ್‌ಸಿಬಿ ಕ್ರಿಕೆಟ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಳು ವಿಕೆಟ್ ಗಳ ಅಂತರದಿಂದ ಸೋಲುಂಡಿದೆ.
ಪಂದ್ಯಾವಳಿಯಲ್ಲಿ ಆಡಿರುವ ಆರನೇ ಪಂದ್ಯದಲ್ಲಿ ಮೊದಲ ಸೋಲು ಕಂಡಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಟೂರ್ನಿಯ 15ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡ ನಂದಿನಿ ಶರ್ಮಾ (3–26), ಮರಿಝಾನ್ ಕಾಪ್ (2–17), ಮಿನ್ನು ಮಣಿ (2–18) ಹಾಗೂ ಚಿನ್ಲೀ ಹೆನ್ರಿ (2–22) ಅವರ ದಾಳಿಗೆ ತತ್ತರಿಸಿ ಕೇವಲ 109 ರನ್‌ಗಳಿಗೆ ಆಲೌಟಾಯಿತು.
ಗೆಲ್ಲಲು 110 ರನ್‌ಗಳ ಗುರಿ ಪಡೆದಿದ್ದ ಡೆಲ್ಲಿ ತಂಡವು 15.4 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 111 ರನ್ ಗಳಿಸಿತು. ಲೌರಾ ವೊಲ್ವಾರ್ಟ್ (ಔಟಾಗದೆ 42; 38 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು.