×
Ad

ಐಪಿಎಲ್ ಮುನ್ನ ನೆಟ್ ಅಭ್ಯಾಸಕ್ಕೆ ಮರಳಿದ ಧೋನಿ

Update: 2026-01-24 23:38 IST

ಧೋನಿ

ರಾಂಚಿ, ಜ. 24: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನ ಆರಂಭಕ್ಕೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಸಿದ್ಧತೆಯನ್ನು ಆರಂಭಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಂಪೂರ್ಣವಾಗಿ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಮಾಡುವ ವೀಡಿಯೊವೊಂದನ್ನು ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಜೆಎಸ್‌ಸಿಎ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. 44 ವರ್ಷದ ಆಟಗಾರನ ವೀಡಿಯೊವನ್ನು ಹಾಕಿರುವ ಅಸೋಸಿಯೇಶನ್, ಧೋನಿ ನಮ್ಮ ಹೆಮ್ಮೆ ಎಂಬುದಾಗಿ ಬರೆದಿದೆ. ‘‘ನೋಡಿ, ಯಾರು ಬಂದಿದ್ದಾರೆ? ಜೆಎಸ್‌ಸಿಎಯ ಹೆಮ್ಮೆ: ಮಹೇಂದ್ರ ಸಿಂಗ್ ಧೋನಿ’’ ಎಂದು ಅದು ಹೇಳಿದೆ.

ಭಾರತೀಯ ಕ್ರಿಕೆಟ್ ತಂಡ ಮತ್ತು ಜಾರ್ಖಂಡ್ ತಂಡದ ಮಾಜಿ ಬ್ಯಾಟರ್ ಸೌರಭ್ ತಿವಾರಿಯೊಂದಿಗೆ ಧೋನಿ ಲೋಕಾಭಿರಾಮವಾಗಿ ಹರಟುತ್ತಿರುವುದನ್ನೂ ವೀಡಿಯೊ ತೋರಿಸುತ್ತದೆ. ಧೋನಿ 2020ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ. ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವರ 17ನೇ ಋತುವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News