×
Ad

2 ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಈ ವರ್ಷಾಂತ್ಯದಲ್ಲಿ ನಿವೃತ್ತಿ

Update: 2025-06-19 21:50 IST

ಚಾಂಪಿಯನ್ ಕ್ವಿಟೋವಾ | PC: X  


ಲಂಡನ್: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ 2025ರ ಋತುವಿನ ಅಂತ್ಯಕ್ಕೆ ನಿವೃತ್ತಿಯಾಗುವುದಾಗಿ ಗುರುವಾರ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

‘‘ಜೀವನದ ಎಲ್ಲ ಹಂತಗಳ ನಂತರ ಹೊಸ ಅಧ್ಯಾಯಕ್ಕೆ ಸಮಯ ಬರುತ್ತದೆ. ಆ ಸಮಯ ನನಗೆ ಈಗ ಬಂದಿದೆ. ವೃತ್ತಿಪರ ಆಟಗಾರ್ತಿಯಾಗಿ 2025 ನನ್ನ ಕೊನೆಯ ವರ್ಷವಾಗಲಿದೆ’’ ಎಂದು 35ರ ವಯಸ್ಸಿನ ಝೆಕ್ ಆಟಗಾರ್ತಿ ಪೋಸ್ಟ್ ಮಾಡಿದ್ದಾರೆ.

ವಿಶ್ವದ ಮಾಜಿ ನಂ.2 ಆಟಗಾರ್ತಿ ಕ್ವಿಟೋವಾ 2011 ಹಾಗೂ 2014ರಲ್ಲಿ ವಿಂಬಲ್ಡನ್ ಚಾಂಪಿಯನ್‌ಶಿಪ್ ಜಯಿಸಿದ್ದರು. ಈ ವರ್ಷದ ಚಾಂಪಿಯನ್‌ಶಿಪ್‌ನ ಪ್ರಮುಖ ಸುತ್ತಿಗೆ ವೈಲ್ಡ್‌ಕಾರ್ಡ್ ಪಡೆದಿದ್ದಾರೆ. ಎಡಗೈ ಆಟಗಾರ್ತಿ ಯು.ಎಸ್. ಓಪನ್ ಟೂರ್ನಿಯ ವೇಳೆ ವಿದಾಯ ಹೇಳಲು ಯೋಜಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News