×
Ad

ಕ್ರಿಕೆಟ್ ವಿಶ್ವಕಪ್ ಫೈನಲ್ : ‘ಇದು ನನ್ನ ಕನಸು ನನಸಾದ ಕ್ಷಣ’ ಎಂದ ರೋಹಿತ್ ಶರ್ಮಾ

Update: 2023-11-19 16:49 IST

Photo : cricketworldcup.com

ಹೊಸದಿಲ್ಲಿ: 2011ರ ವಿಶ್ವಕಪ್‌ನಲ್ಲಿ ಭಾರತೀಯ ತಂಡದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದ ರೋಹಿತ್ ಶರ್ಮಾ ರವಿವಾರ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಭಾರತೀಯ ತಂಡದ ನಾಯಕರಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೆಜ್ಜೆಯಿರಿಸಿದರು. 2011ರ ವೈಫಲ್ಯದಿಂದ ಹೊರಬರಲು ಸಮಯವನ್ನು ತೆಗೆದುಕೊಂಡಿದ್ದ ಶರ್ಮಾಗೆ ಇದೊಂದು ಭಾವನಾತ್ಮಕ ಘಳಿಗೆಯಾಗಿತ್ತು. ಅಂತಿಮ ಪಂದ್ಯದ ಆರಂಭಕ್ಕೆ ಮುನ್ನ ಟಾಸ್ ಸಂದರ್ಭದಲ್ಲಿ ಭಾರತೀಯ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದ ಶರ್ಮಾ,‘ಇದು ನನ್ನ ಕನಸು ನನಸಾದ ಕ್ಷಣವಾಗಿದೆ’ಎಂದು ಹೇಳಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಮೊದಲು ಫೀಲ್ಡಿಂಗ್ ಅನ್ನು ಆಯ್ದುಕೊಂಡರು. ನೀವು ಟಾಸ್ ಗೆದ್ದಿದ್ದರೆ ಏನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಶರ್ಮಾ,ತಾನು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಉತ್ತರಿಸಿದರು.

2011ರಿಂದ 2023ರವರೆಗಿನ ಶರ್ಮಾರ ಪಯಣದ ಕುರಿತು ಶಾಸ್ತ್ರಿ ಪ್ರಶ್ನಿಸಿದಾಗ,‘ನನ್ನ ಕನಸು ನನಸಾಗಿದೆ ’ಎಂದು ಭಾವನಾತ್ಮಕವಾಗಿ ನುಡಿದರು.

‘ವಿಶ್ವಕಪ್ ಫೈನಲ್‌ನಲ್ಲಿ ತಂಡದ ನಾಯಕನಾಗಬೇಕು ಎಂಬ ಕನಸು ನನಸಾಗಿದೆ. ನಮ್ಮ ಮುಂದೆ ಏನಿದೆ ಎನ್ನುವುದು ನನಗೆ ತಿಳಿದಿದೆ. ನಾವು ಚೆನ್ನಾಗಿ ಆಡಿ ಗೆಲ್ಲಬೇಕು.ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇದನ್ನೇ ನಾವು ಕಳೆದ 10 ಪಂದ್ಯಗಳಲ್ಲಿ ನಿರಂತರವಾಗಿ ಮಾಡಿದ್ದೇವೆ. ನಾವು ಅದೇ ತಂಡವಾಗಿ ಆಡುತ್ತಿದ್ದೇವೆ ’ ಎಂದು ಶರ್ಮಾ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News