×
Ad

IPL 2025 | ಅಭಿಷೇಕ್ ಶರ್ಮಾ ಜೊತೆ ಮೈದಾನದಲ್ಲಿ ಜಗಳಕ್ಕಿಳಿದ ದಿಗ್ವೇಶ್ ರಥಿಗೆ ಒಂದು ಪಂದ್ಯದಿಂದ ಅಮಾನತು

Update: 2025-05-20 12:05 IST

Photo credit: BCCI

ಮುಂಬೈ: ಸೋಮವಾರ ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯ ಮೂರನೇ ಹಂತ 1ನ್ನು ಉಲ್ಲಂಘನೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ಸಿಂಗ್ ರಥಿಗೆ ಪಂದ್ಯ ಶುಲ್ಕದ 50 ಪ್ರತಿಶತ ದಂಡ ಮತ್ತು ಒಂದು ಪಂದ್ಯದಿಂದ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಈ ಋತುವಿನಲ್ಲಿ ದಿಗ್ವೇಶ್ ಸಿಂಗ್ ಐದು ಡಿಮೆರಿಟ್ ಅಂಕಗಳನ್ನು ಗಳಿಸಿದ್ದಾರೆ. ಇದು ಸಹಜವಾಗಿಯೇ ಒಂದು ಪಂದ್ಯದ ಅಮಾನತಿಗೆ ಕಾರಣವಾಯಿತು. ನಿನ್ನೆಯ ಅವರ ಅನುಚಿತ ವರ್ತನೆ ಎರಡು ಋಣಾತ್ಮಕ ಅಂಕಗಳನ್ನು ನೀಡಿತು. ಈ ಹಿಂದಿನ ಉಲ್ಲಂಘನೆಗಳಿಂದ ಅವರಿಗೆ ಮೂರು ಋಣಾತ್ಮಕ ಅಂಕ ನೀಡಲಾಗಿತ್ತು.

ಅವರ ಹಿಂದಿನ ಉಲ್ಲಂಘನೆಗಳಲ್ಲಿ ಎಪ್ರಿಲ್ 1, 2025 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಡಿಮೆರಿಟ್ ಪಾಯಿಂಟ್ ಮತ್ತು ಎಪ್ರಿಲ್ 4, 2025 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಅಂಕಗಳು ಸೇರಿವೆ.

ಐದು ಋಣಾತ್ಮಕ ಅಂಕಗಳನ್ನು ಪಡೆದ ಪರಿಣಾಮವಾಗಿ, ದಿಗ್ವೇಶ್ ಸಿಂಗ್ ಮೇ 22, 2025 ರಂದು ಅಹಮದಾಬಾದ್‌ ನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ LSG ಯ ಮುಂಬರುವ ಪಂದ್ಯದಲ್ಲಿ ಆಡುವುದರಿಂದ ವಂಚಿತರಾಲಿದ್ದಾರೆ.

20 ಎಸೆತಗಳಲ್ಲಿ 59 ರನ್ ಗಳಿಸಿದ್ದ ಅಭಿಷೇಕ್ ಅವರನ್ನು ಔಟ್ ಮಾಡಿದ ನಂತರ ರಥಿ ತನ್ನ ಎಂದಿನ ನೋಟ್‌ಬುಕ್ ಶೈಲಿಯ ಸನ್ನೆಯನ್ನು ಆಚರಿಸಿದಾಗ ಈ ಘಟನೆ ನಡೆದಿದೆ. ರಥಿಯ ಸಂಭ್ರಮಾಚರಣೆಯು SRH ಆರಂಭಿಕ ಆಟಗಾರ ಅಭಿಷೇಕ್ ಗೆ ಇಷ್ಟವಾಗಲಿಲ್ಲ. ಅವರು ಕೋಪದಿಂದ ಪ್ರತಿಕ್ರಿಯಿಸಿದರು.

ಅಂಪೈರ್‌ಗಳು ಮತ್ತು ತಂಡದ ಸದಸ್ಯರು ಬೇಗನೆ ಮಧ್ಯೆ ಪ್ರವೇಶಿಸಿ ವಾಗ್ವಾದವನ್ನು ಶಮನಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News