ದುಲೀಪ್ ಟ್ರೋಫಿ | ಮೊದಲ ಸುತ್ತಿನ ಪಂದ್ಯಾವಳಿಗೆ ಮುಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಅಲಭ್ಯ
PC : PTI
ಹೊಸದಿಲ್ಲಿ : ಅನಾರೋಗ್ಯದಿಂದ ಬಳಲುತ್ತಿರುವ ವೇಗಿಗಳಾದ ಮುಹಮ್ಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ದುಲೀಪ್ ಟ್ರೋಫಿ ಪಂದ್ಯಾವಳಿಯ ಆರಂಭಿಕ ಸುತ್ತಿನ ಪಂದ್ಯಕ್ಕೆ ಅಲಭ್ಯರಾಗಿದ್ದು, ಬಿಸಿಸಿಐ ಆಯ್ಕೆ ಸಮಿತಿಯು ಮಂಗಳವಾರ ಬದಲಿ ಆಟಗಾರರನ್ನು ನೇಮಿಸಿದೆ.
ಬಿ ತಂಡವು ಹಿರಿಯ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇರನ್ನು ಬಿಡುಗಡೆ ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ.
ದೇಶೀಯ ಋತುವಿನಲ್ಲಿ ಕೆಂಪು ಚೆಂಡಿನ ಕ್ರಿಕೆಟ್ ಆರಂಭಕ್ಕೆ ಚಾಲನೆ ನೀಡಲಿರುವ ದುಲೀಪ್ ಟ್ರೋಫಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿನ ಭಾರತೀಯ ಅಗ್ರ ಆಟಗಾರರು ಹಾಗೂ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದಾರೆ.
ಸೆಪ್ಟಂಬರ್ 5ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯಲಿದೆ.
ಬಿ ಹಾಗೂ ಸಿ ತಂಡಗಳಲ್ಲಿ ಸಿರಾಜ್ ಹಾಗೂ ಮಲಿಕ್ ಬದಲಿಗೆ ನವದೀಪ್ ಸೈನಿ ಹಾಗೂ ಗೌರವ್ ಯಾದವ್ ಆಯ್ಕೆಯಾಗಿದ್ದಾರೆ. ಸಿರಾಜ್ ಹಾಗೂ ಮಲಿಕ್ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದು ದುಲೀಪ್ ಟ್ರೋಫಿ ಪಂದ್ಯದ ಸಮಯಕ್ಕೆ ಫಿಟ್ ಆಗುವ ನಿರೀಕ್ಷೆ ಇಲ್ಲ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.