×
Ad

ಗೋವಾಕ್ಕೆ ಫಿಡೆ ಚೆಸ್ ವಿಶ್ವಕಪ್ ಆತಿಥ್ಯ

Update: 2025-08-26 21:40 IST

 ಫಿಡೆ ಚೆಸ್ ವಿಶ್ವಕಪ್ ಆತಿಥ್ಯ | PC: @FIDE_chess 

ಪಣಜಿ, ಆ. 26: ಫಿಡೆ ವಿಶ್ವಕಪ್ 2025 ಚೆಸ್ ಪಂದ್ಯಾವಳಿ ಗೋವಾದಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 27ರವರೆಗೆ ನಡೆಯಲಿದೆ. ಚೆಸ್‌ ನ ಅತ್ಯಂತ ಪ್ರತಿಷ್ಠಿತ ಪಂದ್ಯಾವಳಿಗಳ ಪೈಕಿ ಒಂದಾಗಿರುವ ಚೆಸ್ ವಿಶ್ವಕಪ್ ಭಾರತಕ್ಕೆ ಬಂದಿದೆ.

ಒಟ್ಟು ಎರಡು ಮಿಲಿಯ ಡಾಲರ್ (ಸುಮಾರು 17.5 ಕೋಟಿ ರೂಪಾಯಿ) ಬಹುಮಾನ ಮೊತ್ತವನ್ನು ಒಳಗೊಂಡಿರುವ ಪಂದ್ಯಾವಳಿಯಲ್ಲಿ 206 ಆಟಗಾರರು ಸ್ಪರ್ಧಿಸಲಿದ್ದಾರೆ. ಈ ಪಂದ್ಯಾವಳಿಯಿಂದ ಮೂವರು ಆಟಗಾರರು 2026ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ ಗೆ ಅರ್ಹತೆ ಪಡೆಯಲಿದ್ದಾರೆ.

ಎಂಟು ಸುತ್ತುಗಳ ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಅಗ್ರ 50 ಶ್ರೇಯಾಂಕದ ಆಟಗಾರರು ಎರಡನೇ ಸುತ್ತಿನಿಂದ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಪ್ರತೀ ಪಂದ್ಯವು ಎರಡು ಕ್ಲಾಸಿಕಲ್ ಗೇಮ್‌ ಗಳು ಹಾಗೂ ಅಗತ್ಯ ಬಿದ್ದರೆ ರ್ಯಾಪಿಡ್ ಮತ್ತು ಬ್ರಿಝ್ ಟೈಬ್ರೇಕ್‌ ಗಳನ್ನು ಹೊಂದಿರುತ್ತದೆ.

ಗೋವಾದ ಪ್ರಾಕೃತಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವಕ್ಕಾಗಿ ಪಂದ್ಯಾವಳಿಗೆ ಅದನ್ನು ಆರಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಭಾರತವು ಚೆಸ್‌ ನ ಶಕ್ತಿಕೇಂದ್ರವಾಗಿ ಹೊರಹೊಮ್ಮಿದೆ. ಕಳೆದ ವರ್ಷ ಡಿ. ಗುಕೇಶ್ ವಿಶ್ವ ಚಾಂಪಿಯನ್ ಆದರು. ಚೆಸ್ ಒಲಿಂಪಿಯಾಡ್‌ ನಲ್ಲಿ, ಓಪನ್ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ರಾಷ್ಟ್ರೀಯ ತಂಡಗಳು ವಿಜಯ ಗಳಿಸಿದವು. ಜುಲೈಯಲ್ಲಿ ಹದಿಹರೆಯದ ದಿವ್ಯಾ ದೇಶಮುಖ್ ಮಹಿಳಾ ವಿಶ್ವಕಪ್ ಗೆದ್ದರು.

ಓಪನ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ದೇಶದಲ್ಲಿ ಚೆಸ್‌ನ ಇನ್ನೊಂದು ಮೈಲಿಗಲ್ಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News