×
Ad

ಫುಟ್ಬಾಲ್ ವಿಶ್ವಕಪ್: 10 ಲಕ್ಷ ಟಿಕೆಟ್‌ಗಳ ಮಾರಾಟ

Update: 2025-10-17 21:40 IST

 ಫಿಫಾ ವಿಶ್ವಕಪ್‌ | Photo Credit  : PTI

ಹೊಸದಿಲ್ಲಿ, ಅ. 17: ಉತ್ತರ ಅಮೆರಿಕದಲ್ಲಿ ಮುಂದಿನ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್‌ನ 10 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಖರೀದಿಯಾಗಿವೆ ಎಂದು ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾ ತಿಳಿಸಿದೆ. ಟಿಕೆಟ್ ಮಾರಾಟ ಆರಂಭಗೊಂಡ ಕೆಲವೇ ವಾರಗಳಲ್ಲಿ ಇದು ಸಂಭವಿಸಿದೆ.

212 ದೇಶಗಳ ಫುಟ್ಬಾಲ್ ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. 3 ಆತಿಥೇಯ ದೇಶಗಳಲ್ಲದೆ, ಇಂಗ್ಲೆಂಡ್, ಜರ್ಮನಿ, ಬ್ರೆಝಿಲ್, ಸ್ಪೇನ್, ಕೊಲಂಬಿಯಾ, ಅರ್ಜೆಂಟೀನ ಹಾಗೂ ಫ್ರಾನ್ಸ್‌ನಂತಹ ಫುಟ್ಬಾಲ್ ದಿಗ್ಗಜ ದೇಶಗಳಿಂದ ಟಿಕೆಟ್‌ಗೆ ಭಾರೀ ಬೇಡಿಕೆ ಇದೆ.ಆದರೆ, 48 ತಂಡಗಳ ಪಂದ್ಯಾವಳಿಗೆ ಈವರೆಗೆ 28 ತಂಡಗಳು ಮಾತ್ರ ತೇರ್ಗಡೆಗೊಂಡಿವೆ.

ಪಂದ್ಯಾವಳಿಯು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆತಿಥ್ಯದಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News