×
Ad

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಗಾಯದ ಸಮಸ್ಯೆ

Update: 2023-10-19 20:13 IST

Photo Credit: ANI

ಪುಣೆ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಪಾದದಲ್ಲಿ ನೋವು ಕಾಣಿಸಿಕೊಂಡ ಕಾರಣ ಮೈದಾನವನ್ನು ತೊರೆದಿದ್ದು, ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡ ಅನಿರೀಕ್ಷಿತ ಹಿನ್ನಡೆ ಎದುರಿಸಿದೆ.

ಇನಿಂಗ್ಸ್‌ನ 9ನೇ ಓವರ್‌ನ ಮೂರನೇ ಎಸೆತದಲ್ಲಿ ಈ ಘಟನೆ ನಡೆಯಿತು. ಪಾಂಡ್ಯ ಬೌಲಿಂಗ್ ದಾಳಿಯಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ಲಿಟನ್ ದಾಸ್ ಸ್ಟ್ರೇಟ್ ಡ್ರೈವ್ ಹೊಡೆದರು. ಈ ವೇಳೆ ಅವರು ಕಾಲಿನಲ್ಲಿ ಚೆಂಡನ್ನು ತಡೆಯಲು ವಿಫಲ ಯತ್ನ ನಡೆಸಿದಾಗ ಎಡವಿ ಬಿದ್ದರು. ಚೆಂಡು ಬೌಂಡರಿ ಗೆರೆ ದಾಟಿತು.

ಈ ವೇಳೆ ಪಾಂಡ್ಯ ಪಾದದ ನೋವಿಗೆ ಒಳಗಾದರು. ನೋವು ತಾಳಲಾರದೆ ಕುಂಟುತ್ತಾ ಸಾಗಿದ ಹಾರ್ದಿಕ್ ಪಾಂಡ್ಯ ಅವರಿಗೆ ಫಿಸಿಯೋ ನೆರವನ್ನು ಒದಗಿಸಲಾಯಿತು. ಇದರಿಂದ ಸ್ವಲ್ಪ ಹೊತ್ತು ಪಂದ್ಯಕ್ಕೆ ಅಡ್ಡಿಯಾಯಿತು. ಅಂತಿಮವಾಗಿ ಪಾಂಡ್ಯ ಅವರು ಬೌಲಿಂಗ್ ಮುಂದುವರಿಸಲಾಗದೆ ಮೈದಾನದಿಂದ ಹೊರಗೆ ನಡೆದರು.

ಪಾಂಡ್ಯ ಮೈದಾನದಿಂದ ಹೊರ ನಡೆದ ನಂತರ ಸೂರ್ಯಕುಮಾರ ಯಾದವ್ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದರು.

ಹಾರ್ದಿಕ್ ಪಾಂಡ್ಯ ಅವರ ಗಾಯದ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಬರಬೇಕಾಗಿದೆ. ಅವರ ಗಾಯದ ಮೇಲೆ ನಿಗಾವಹಿಸಲಾಗುತ್ತಿದೆ. ಅವರಿಗೆ ಸ್ಕ್ಯಾನಿಂಗ್ ನಡೆಸಲು ಕರೆದೊಯ್ಯಲಾಗಿದೆ ಎಂದು ಎಕ್ಸ್‌ನಲ್ಲಿ ಬಿಸಿಸಿಐ ಪೋಸ್ಟ್ ಮಾಡಿದೆ.

ಪಾಂಡ್ಯ 9ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಎರಡು ಬೌಂಡರಿ ಬಿಟ್ಟುಕೊಟ್ಟು ದುಬಾರಿ ಎನಿಸಿದರು.

ಪಾಂಡ್ಯ ಅವರ ಓವರ್ ಅನ್ನ್ನು ಪೂರ್ಣಗೊಳಿಸಲು ಮುಂದಾದ ವಿರಾಟ್ ಕೊಹ್ಲಿ ತನ್ನ ಓವರ್‌ನಲ್ಲಿ ಕೇವಲ ಎರಡು ರನ್ ನೀಡಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News