×
Ad

ಹಿರಿಯ ಪುರುಷರ ರಾಷ್ಟ್ರೀಯ ತರಬೇತಿ ಶಿಬಿರ; 33 ಸದಸ್ಯರ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

Update: 2025-09-29 21:44 IST

Photo Credit : hockeyindia.org

ಹೊಸದಿಲ್ಲಿ, ಸೆ.29: ಬೆಂಗಳೂರಿನಲ್ಲಿರುವ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿ ಸೆ.29ರಿಂದ ಅಕ್ಟೋಬರ್ 18ರ ತನಕ ನಿಗದಿಯಾಗಿರುವ ಹಿರಿಯ ಪುರುಷರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಹಾಕಿ ಇಂಡಿಯಾವು 33 ಸದಸ್ಯರ ಸಂಭಾವ್ಯ ಕೋರ್ ಗ್ರೂಪ್ ಅನ್ನು ಪ್ರಕಟಿಸಿದೆ.

ನವೆಂಬರ್‌ ನಲ್ಲಿ ಮಲೇಶ್ಯದಲ್ಲಿ ನಡೆಯಲಿರುವ 31ನೇ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಗೂ ದಕ್ಷಿಣ ಆಫ್ರಿಕಾದ ಪ್ರವಾಸಕ್ಕಿಂತ ಮೊದಲು ಈ ಶಿಬಿರ ಏರ್ಪಡಿಸಲಾಗಿದೆ.

ರಾಜ್‌ಗಿರ್‌ನಲ್ಲಿ ಈಚೆಗೆ ನಡೆದಿದ್ದ 2025ರ ಆವೃತ್ತಿಯ ಹೀರೊ ಹಾಕಿ ಏಶ್ಯ ಕಪ್‌ನಲ್ಲಿ ಅಜೇಯ ಓಟದಲ್ಲಿ ತೊಡಗಿದ್ದ ಭಾರತೀಯ ಆಟಗಾರರು ಈ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಏಶ್ಯ ಕಪ್ ಟ್ರೋಫಿ ಗೆದ್ದಿರುವ ಭಾರತವು 2026ರ ಹಾಕಿ ಪುರುಷರ ವಿಶ್ವ ಕಪ್‌ ಗೆ ನೇರ ಪ್ರವೇಶ ಪಡೆದಿತ್ತು.

ಸೀನಿಯರ್ ಪುರುಷರ ಶಿಬಿರಕ್ಕೆ ಹಾಕಿ ತಂಡ

*ಗೋಲ್‌ಕೀಪರ್‌ಗಳು:

ಕ್ರಿಶನ್ ಪಾಠಕ್, ಸೂರಜ್ ಕರ್ಕೇರ, ಪವನ್, ಮೋಹಿತ್.

*ಡಿಫೆಂಡರ್‌ಗಳು:

ಸಂಜಯ್, ಜುಗ್ರಾಜ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುಮಿತ್, ನೀಲಂ ಸಂಜೀವ್, ಜರ್ಮನ್‌ಪ್ರೀತ್ ಸಿಂಗ್, ಪೂವಣ್ಣ ಚಂದುರ ಬೊಬಿ, ಯಶ್‌ದೀಪ್ ಸಿವಾಚ್, ಅಮನ್‌ದೀಪ್ ಲಾಕ್ರಾ, ವರುಣ್ ಕುಮಾರ್.

*ಮಿಡ್ ಫೀಲ್ಡರ್‌ಗಳು:

ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ರಬಿಚಂದ್ರ ಸಿಂಗ್, ವಿಷ್ಣು ಕಾಂತ್ ಸಿಂಗ್, ನೀಲಕಂಠ ಶರ್ಮಾ, ಮುಹಮ್ಮದ್ ರಹೀಲ್, ಮಣಿಂದರ್ ಸಿಂಗ್.

*ಫಾರ್ವರ್ಡ್‌ಗಳು:

ಅಭಿಷೇಕ್, ಸುಖಜೀತ್ ಸಿಂಗ್, ಸೆಲ್ವಂ ಕಾರ್ತಿ, ಶೀಲಾನಂದ ಲಾಕ್ರಾ,ಮನ್‌ದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಅಂಗದ್ ಬೀರ್ ಸಿಂಗ್, ಆದಿತ್ಯ ಅರ್ಜುನ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News