×
Ad

Ind Vs SA T20 | ದಕ್ಷಿಣ ಆಫ್ರಿಕಾದ ವಿರುದ್ಧ ಭಾರತಕ್ಕೆ 101 ರನ್ ಗಳ ಭರ್ಜರಿ ಜಯ

Update: 2025-12-09 22:15 IST

Photo Credit : PTI 

ಕಟಕ್: ಒಡಿಶಾದ ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ T20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 101 ರನ್ ಗಳ ಭರ್ಜರಿ ಜಯಗಳಿಸಿದೆ.

ಭಾರತ ನೀಡಿದ 176 ರನ್ ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 12.3 ಓವರ್ ಗಳಲ್ಲಿ 74 ರನ್‌ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 22 ರನ್ ಗಳಿಸಿದ್ದು ಅಧಿಕ ಮೊತ್ತ. ಉಳಿದಂತೆ ಯಾವ ಬ್ಯಾಟರ್ಗಳು 14ಕ್ಕಿಂತ ಹೆಚ್ಚಿನ ರನ್ ಗಳಿಸಲಿಲ್ಲ.

ಭಾರತದ ಬೌಲರ್ ಗಳು ಬಿಗುದಾಳಿ ನಡೆಸಿ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕಲು ಯಶಸ್ವಿಯಾದರು. ಅರ್ಶದೀಪ್ ಸಿಂಗ್, ಬುಮ್ರಾ, ವರುಣ್, ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುಂಚೆ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ಕೈಸುಟ್ಟುಕೊಂಡಿತು. 6 ವಿಕೆಟ್ ಕಳೆದುಕೊಂಡ ಭಾರತ ತಂಡವು 20 ಓವರ್ ಗಳಲ್ಲಿ 175 ರನ್ ಗಳಿಸಿತು.

ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 59 ರನ್ ಗಳಿಸಿ ಟಿ20 ಪಂದ್ಯದ ರಸದೌತಣ ನೀಡಿದರು. ಅವರ ಇನ್ನಿಂಗ್ಸ್ ನಲ್ಲಿ 4 ಸಿಕ್ಸರ್, 6 ಬೌಂಡರಿಗಳು ಸೇರಿದ್ದವು. ಉಳಿದಂತೆ ತಿಲಕ್ ವರ್ಮಾ 26, ಅಕ್ಸರ್ ಪಟೇಲ್ 23, ಸೂರ್ಯ ಕುಮಾರ್ ಯಾದವ್ 12 ರನ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News