×
Ad

IND Vs ENG T20 ವಿಶ್ವಕಪ್ | ಮತ್ತೆ ಅಬ್ಬರಿಸಿದ ಸಂಜು; ಫೈನಲ್ ಟಿಕೆಟ್ ಗೆ ಇಂಗ್ಲೆಂಡ್ ಗೆ ಬೇಕು 254 ರನ್

Update: 2026-03-05 20:49 IST

ಸಂಜು ಸ್ಯಾಮ್ಸನ್ |Photo : X/BCCI

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳ ಬೃಹತ್ ಮೊತ್ತ ಕಟ್ಟಿದೆ.

ಕಳೆದ ಪಂದ್ಯದ ಹೀರೊ ಸಂಜು ಸ್ಯಾಮ್ಸನ್ ಈ ಬಾರಿಯೂ ಅಬ್ಬರಿಸಿದರು. 42 ಎಸೆತ ಎದುರಿಸಿದ ಅವರು 8 ಬೌಂಡರಿ 7 ಸಿಕ್ಸರ್ ಸಹಿತ 89 ರನ್ ಗಳಿಸಿದರು.

ಟಾಸ್ ಗೆದ್ದು ಭಾಸರ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ಇಂಗ್ಲೆಂಡ್ ತಂಡವು ಆರಂಭದಲ್ಲಿ ಅಭಿಷೇಕ್ ಶರ್ಮಾ ಅವರನ್ನು 9 ರನ್ ಗೆ ಔಟ್ ಮಾಡುವ ಮೂಲಕ ಮೇಲುಗೈ ಸಾಧಿಸಿತು. ಆಗ ಸಂಜು ಸ್ಯಾಮ್‌ಸನ್ ಅವರಿಗೆ ಸಾಥ್ ನೀಡಿದ ಇಶಾನ್ ಕಿಶನ್ ಉತ್ತಮ  ಇನ್ನಿಂಗ್ಸ್ ಕಟ್ಟಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News