IPL 2026 | ನೂತನ ಜೆರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್
Photo Credit : X
ಮುಂಬೈ, ಮಾ.6: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 28ರಿಂದ ಆರಂಭವಾಗಲಿರುವ 2016ರ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಗಾಗಿ ತನ್ನ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಮುಂಬೈ ಇಂಡಿಯನ್ಸ್ ತಂಡವು ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ಹೊಸ ಜೆರ್ಸಿಯಲ್ಲಿ ಸಾಂಪ್ರದಾಯಿಕ ನೀಲಿ ಹಾಗೂ ಚಿನ್ನದ ಬಣ್ಣದ ಪ್ಯಾಲೆಟನ್ನು ಉಳಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡವು 2013, 2015, 2017, 2019 ಹಾಗೂ 2020ರಲ್ಲಿ ಐದು ಬಾರಿ ಪ್ರಶಸ್ತಿಗಳನ್ನು ಜಯಿಸಿತ್ತು. 2010ರಲ್ಲಿ ಮಾತ್ರ ರನ್ನರ್ಸ್ ಅಪ್ ಆಗಿತ್ತು. ಐಪಿಎಲ್‌ನಲ್ಲಿ ಗರಿಷ್ಠ ಟ್ರೋಫಿಗಳನ್ನು ಗೆದ್ದುಕೊಂಡು ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ತನ್ನ ದಾಖಲೆ ಹಂಚಿಕೊಂಡಿದೆ. ಸಿಎಸ್‌ಕೆ ಇತ್ತೀಚೆಗಷ್ಟೇ ತನ್ನ ಜೆರ್ಸಿಯನ್ನು ಅನಾವರಣಗೊಳಿಸಿತ್ತು.
ಕಳೆದ ವರ್ಷ ಮುಂಬೈ ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಪ್ಲೇ ಆಫ್‌ಗೆ ತೇರ್ಗಡೆಯಾಗಿತ್ತು. ಆದರೆ ಎಲಿಮಿನೇಟರ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಪಂಜಾಬ್ ತಂಡ 2025ರಲ್ಲಿ ರನ್ನರ್ಸ್ ಅಪ್ ಆಗಿತ್ತು.
2026ರ ಋತುವಿನ ತಯಾರಿಯ ಭಾಗವಾಗಿ ಶಾರ್ದುಲ್ ಠಾಕೂರ್ ಹಾಗೂ ದೀಪಕ್ ಚಹಾರ್‌ರಂತಹ ಆಟಗಾರರು ಡಿ.ವೈ.ಪಾಟೀಲ್ ಟಿ-20 ಕಪ್‌ನಲ್ಲಿ ಭಾಗವಹಿಸಿದ್ದಾರೆ. ಮುಂಬೈ ತಂಡವು ಮಾ.12ರಿಂದ 15ರ ತನಕ ತನ್ನ ತರಬೇತಿ ಶಿಬಿರವನ್ನು ಆರಂಭಿಸುವ ನಿರೀಕ್ಷೆ ಇದೆ. ಟಿ-20 ವಿಶ್ವಕಪ್ ಟೂರ್ನಿ ಮುಗಿದ ನಂತರ ವಿದೇಶಿ ಆಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.