×
Ad

ಭಾರತ - ಆಸ್ಟ್ರೇಲಿಯ ಸರಣಿಯ ಅಂತಿಮ ಪಂದ್ಯ; 81 ರನ್ ಗಳಿಸಿ ಔಟಾದ ರೋಹಿತ್ ಶರ್ಮಾ

Update: 2023-09-27 19:53 IST

ರೋಹಿತ್ ಶರ್ಮಾ | Photo: X \ @BCCI

ರಾಜ್ ಕೋಟ್ :ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ 31 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ರೋಹಿತ್ ಶರ್ಮಾ ಔಟ್ ಆದರು. ಸ್ಫೋಟದ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ 57 ಎಸೆತಗಳಲ್ಲಿ 81 ರನ್ ಗಳಿಸಿ 20.6 ನೇ ಓವರ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಅವರಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಎರಡು ಪಂದ್ಯಗಳ ವಿಶ್ರಾಂತಿ ಬಳಿಕ ಮರಳಿದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ 142.11 ರನ್ ಸ್ಟ್ರೈಕ್ ರೇಟ್ ನೊಂದಿಗೆ 6 ಸಿಕ್ಸರ್ 4 ಬೌಂಡರಿ ಬಾರಿಸಿದ್ದರು. ಇನ್ನು ಭಾರತಕ್ಕೆ 24.5 ಓವರ್ ಗಳಲ್ಲಿ 195 ರನ್ ಬೇಕಾಗಿದೆ.

ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಕ್ರೀಸ್ ನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News