ಟಿ20 ತಂಡ ಪ್ರಕಟ | ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ನೂತನ ನಾಯಕ; ವೈಭವ್ ಸೂರ್ಯವಂಶಿಗೂ ತಂಡದಲ್ಲಿ ಸ್ಥಾನ
ಸೂರ್ಯಕುಮಾರ್ ಯಾದವ್ ಗೆ ಕೊಕ್
ಶ್ರೇಯಸ್ ಅಯ್ಯರ್ (Photo: PTI)
ಹೊಸದಿಲ್ಲಿ: ಟಿ-20 ಭಾರತೀಯ ತಂಡಕ್ಕೆ ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಬದಲು ಶ್ರೇಯಸ್ ಅಯ್ಯರ್ ಅವರನ್ನು ತಂಡದ ನಾಯಕರನ್ನಾಗಿ ಪ್ರಕಟಿಸಲಾಗಿದೆ. ತಂಡದ ಉಪ ನಾಯಕರಾಗಿ ತಿಲಕ್ ವರ್ಮ ಆಯ್ಕೆಗೊಂಡಿದ್ದಾರೆ.
ಭಾರತ ತಂಡದಲ್ಲಿ 15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತೀಯ ಟಿ-20 ತಂಡಕ್ಕೆ 31 ವರ್ಷದ ಶ್ರೇಯಸ್ ಅಯ್ಯರ್ ನಾಯಕರಾಗಿ ಆಯ್ಕೆಯಾಗಿರುವುದನ್ನು ಭಾರತೀಯ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸಮ್ಮುಖದಲ್ಲಿ ಶನಿವಾರ ಮುಂಬೈನಲ್ಲಿ ದೃಢಪಡಿಸಿದ್ದಾರೆ.
ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳು, ಜಪಾನ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ತಂಡಗಳನ್ನು ಪ್ರಕಟಿಸಿದೆ.
28 ವರ್ಷದ ತಿಲಕ್ ವರ್ಮ ತಂಡದ ಉಪನಾಯಕರಾಗಿಯಲ್ಲದೆ, ಜೂನ್ 26 ಮತ್ತು ಜೂನ್ 28ರಂದು ಬೆಲ್ಫಾಸ್ಟ್ ನಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಎರಡು ಟಿ-20 ಪಂದ್ಯಗಳ ನಾಯಕರೂ ಆಗಿರಲಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ-20 ಸರಣಿಗೆ ಮೊದಲ ಬಾರಿಗೆ ನಾಯಕರಾಗಲಿದ್ದು, ಈ ಸರಣಿ ಚೆಸ್ಟರ್-ಲೀ-ಸ್ಟ್ರೀಟ್ ನಲ್ಲಿ ಜುಲೈ 1ರಿಂದ ಪ್ರಾರಂಭಗೊಳ್ಳಲಿದೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತ ತಂಡವನ್ನು ತವರಿನಲ್ಲಿ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾಲಿ ಭಾರತೀಯ ಟಿ-20 ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ರನ್ನು ಐರ್ಲೆಂಡ್, ಇಂಗ್ಲೆಂಡ್ ಅಥವಾ 2026ರ ಏಶ್ಯನ್ ಗೇಮ್ಸ್ ತಂಡಕ್ಕೂ ಪರಿಗಣಿಸಲಾಗಿಲ್ಲ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ:
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮ (ಉಪ ನಾಯಕ), ರವಿ ಬಿಷ್ಣೋಯಿ, ಅಭಿಷೇಕ್ ಶರ್ಮ, ನಿತೀಶ್ ಕುಮಾರ್ ರೆಡ್ಡಿ, ಮುಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್ ಹಾಗೂ ವೈಭವ್ ಸೂರ್ಯವಂಶಿ.
ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ:
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮ (ಉಪ ನಾಯಕ), ರವಿ ಬಿಷ್ಣೋಯಿ, ಅಭಿಷೇಕ್ ಶರ್ಮ, ನಿತೀಶ್ ಕುಮಾರ್ ರೆಡ್ಡಿ, ಮುಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ ಪ್ರಿನ್ಸ್ ಯಾದವ್ ಹಾಗೂ ವೈಭವ್ ಸೂರ್ಯವಂಶಿ.
ಏಷ್ಯನ್ ಗೇಮ್ಸ್ ಗೆ ಭಾರತ ತಂಡ:
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮ (ಉಪ ನಾಯಕ), ರವಿ ಬಿಷ್ಣೋಯಿ, ಅಭಿಷೇಕ್ ಶರ್ಮ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ ಹಾಗೂ ವೈಭವ್ ಸೂರ್ಯವಂಶಿ.