ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಭಾರತದ ಅವಕಾಶಕ್ಕೆ ಧಕ್ಕೆ
Photo Credit : PTI
ವೆಲ್ಲಿಂಗ್ಟನ್: ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡ ಕಾರಣ 2027ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪುವ ಭಾರತದ ಅವಕಾಶಕ್ಕೆ ಧಕ್ಕೆಯಾಗಿದೆ.
ಫೈನಲ್ ಸ್ಪರ್ಧೆಯಲ್ಲಿರಬೇಕಾದರೆ ಭಾರತ ತಂಡವು ಉಳಿದಿರುವ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ದಾಖಲಿಸುವ ಅಗತ್ಯವಿದೆ. ಆದರೆ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಗುರಿ ಇನ್ನಷ್ಟು ಕಠಿಣವಾಗಲಿದೆ.
ಕಿವೀಸ್ ವಿರುದ್ಧ ಪಂದ್ಯವು ಡ್ರಾಗೊಂಡಿರುವುದರಿಂದ 2027ರ ಡಬ್ಲ್ಯುಟಿಸಿ ಫೈನಲ್ಗೆ ಭಾರತದ ಹಾದಿಯು ದುರ್ಗಮವಾಗಿದೆ. ಅಗ್ರ ಎರಡರ ಸ್ಪರ್ಧೆಯಲ್ಲಿರಬೇಕಾದರೆ ಇನ್ನುಳಿದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.
ವೆಲ್ಲಿಂಗ್ಟನ್ ಟೆಸ್ಟ್ಗಿಂತ ಮೊದಲು ಭಾರತಕ್ಕೆ ಫೈನಲ್ ತಲುಪುವ ಅವಕಾಶ ಹೆಚ್ಚಾಗಲು ಏಳು ಪಂದ್ಯಗಳಲ್ಲಿ ಆರರಲ್ಲಿ ಜಯ ಗಳಿಸುವ ಅಗತ್ಯವಿತ್ತು. ಡ್ರಾ ಫಲಿತಾಂಶವು ಮುಂದಿನ ಹಾದಿಯನ್ನು ಕಠಿಣವಾಗಿಸುತ್ತದೆ.
ಡ್ರಾ ಫಲಿತಾಂಶದಿಂದಾಗಿ ಭಾರತದ ಪಾಯಿಂಟ್ಸ್ ಪರ್ಸೆಂಟೇಜ್ 51.52ರಿಂದ 50.00ಕ್ಕೆ ಇಳಿದಿದೆ. 2025-27ರ ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲೆ ಉಳಿದುಕೊಂಡಿದೆ.
ಎಂಟು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಜಯ ಗಳಿಸಿರುವ ದಕ್ಷಿಣ ಆಫ್ರಿಕಾವು 72 ಅಂಕದೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯ ತಂಡವು ಎರಡನೇ ಹಾಗೂ ನ್ಯೂಝಿಲ್ಯಾಂಡ್ ತಂಡವು ಮೂರನೇ ಸ್ಥಾನದಲ್ಲಿದೆ.