ನ.24ರಿಂದ ಸಯ್ಯದ್ ಮೋದಿ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿ
Photo Credit: Pavithra A. - sportstar.thehindu
ಹೊಸದಿಲ್ಲಿ: ಲಕ್ನೊದಲ್ಲಿ ನವೆಂಬರ್ 24ರಿಂದ ನವೆಂಬರ್ 29ರ ತನಕ ನಡೆಯಲಿರುವ 2026ರ ಆವೃತ್ತಿಯ ಸಯ್ಯದ್ ಮೋದಿ ಇಂಡಿಯಾ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತವು ಎಲ್ಲ ಐದು ವಿಭಾಗಗಳಲ್ಲಿ ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸಲಿದೆ.
ಸ್ವದೇಶದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಅನುಭವಿ ಅಂತರ್ರಾಷ್ಟ್ರೀಯ ಆಟಗಾರರು, ಉದಯೋನ್ಮುಖ ಆಟಗಾರರು ಹಾಗೂ ಡಬಲ್ಸ್ ಜೋಡಿಗಳ ಮಿಶ್ರಣವಿದೆ.
ಪುರುಷರ ಸಿಂಗಲ್ಸ್ ಸವಾಲನ್ನು ಎಚ್.ಎಸ್. ಪ್ರಣಯ್ ಮುನ್ನಡೆಸಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಅನುಪಸ್ಥಿತಿಯಲ್ಲಿ ಉನ್ನತಿ ಹೂಡಾ, ತನ್ವಿ ಶರ್ಮಾ ಭರವಸೆ ಮೂಡಿಸಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್ ಹಾಗೂ ಶಿಖಾ ಗೌತಮ್, ಋತುಪರ್ಣ-ಶ್ವೇತಪರ್ಣ ಪಾಂಡಾ ಮತ್ತಿತರಿದ್ದಾರೆ.
ಮಿಕ್ಸೆಡ್ ಡಬಲ್ಸ್‌ನಲ್ಲಿ ಧ್ರುವ ಕಪಿಲಾ-ತನಿಶಾ ಕ್ರಾಸ್ಟೊ, ರೋಹನ್ ಕಪೂರ್-ಋತ್ವಿಕಾ ಶಿವಾನಿ ಪ್ರಮುಖರಾಗಿದ್ದಾರೆ.
► ಪುರುಷರ ಸಿಂಗಲ್ಸ್: ಎಚ್.ಎಸ್ ಪ್ರಣಯ್, ತರುಣ್ ಮನ್ನೆಪಲ್ಲಿ, ಕಿರಣ್ ಜಾರ್ಜ್, ರೌನಕ್ ಚೌಹಾಣ್, ಜಿನ್ಪೌಲ್ ಸೋನಾ, ಎಸ್. ಸಾನ್ಕರ್ ಮುತ್ತುಸ್ವಾಮಿ, ಮಿಥುನ್ ಮಂಜುನಾಥ್, ತುಷಾರ್ ಸುವೀರ್, ಸನೀತ್ ದಯಾನಂದ.
► ಮಹಿಳೆಯರ ಸಿಂಗಲ್ಸ್: ಉನ್ನತಿ ಹೂಡಾ, ತನ್ವಿ ಶರ್ಮಾ, ದೇವಿಕಾ ಸಿಹಾಗ್, ಅಶ್ಮಿತಾ ಚಲಿಹಾ, ರಕ್ಷಿತಾ ರಾಮರಾಜ್, ಇಶಾರಾಣಿ ಬರುವಾ, ಮಾಳವಿಕಾ ಬನ್ಸೋಡ್, ಅನ್ಮೋಲ್ ಖರ್ಬ್, ಮಾನ್ಸಿ ಸಿಂಗ್, ಶ್ರೀಯಾಂಶಿ ವಾಲಿಶೆಟ್ಟಿ, ತನ್ಯಾ ಹಿರೇಮಠ, ಆಕರ್ಷಿ, ಅನುಪಮಾ ಉಪಾಧ್ಯಾಯ.
► ಪುರುಷರ ಡಬಲ್ಸ್: ಎಂ.ಆರ್. ಅರ್ಜುನ್-ಹರಿಹರನ್, ಪೃಥ್ವಿ ಕೃಷ್ಣಮೂರ್ತಿ-ಕೃಷ್ಣ ಪ್ರಸಾದ್, ರುಬಾನ್ ಕುಮಾರ್-ಸಾಯಿ ಪ್ರತೀಕ್, ಭಾರ್ಗವ ರಾಮ್-ವಿಶ್ವತೇಜ್, ಅರ್ಜುನ ರೆಡ್ಡಿ-ಅಚ್ಯುತಾದಿತ್ಯ ರಾವ್, ಆಯುಷ್ ಮಖಿಜಾ-ಅಭ್ಯುದಯ ಚೌಧರಿ, ವಿಪ್ಲವ-ವಿರಾಜ್, ಅವಿನಾಶ್-ಆಯುಷ್.