×
Ad

ಅಲನ್ ಡೊನಾಲ್ಡ್ ದಾಖಲೆ ಪುಡಿಗಟ್ಟಿದ ಕಾಗಿಸೊ ರಬಾಡ

Update: 2025-08-10 23:20 IST

PC - thesportstak

ಡಾರ್ವಿನ್, ಆ.10: ಆಸ್ಟ್ರೇಲಿಯದ ವಿರುದ್ಧ ರವಿವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಕಾಗಿಸೊ ರಬಾಡ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಮುಂಚೂಣಿ ಬೌಲರ್ ಆಗಿ ಹೊರಹೊಮ್ಮುವ ಸೂಚನೆ ನೀಡಿದ್ದಾರೆ.

ಟಿ20 ಸರಣಿಯಲ್ಲೂ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿರುವ ರಬಾಡ ಅವರು ಆಸ್ಟ್ರೇಲಿಯದ ಬ್ಯಾಟರ್‌ಗಳ ಬೆವರಿಳಿಸಿದರು.

ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿದ್ದ ರಬಾಡ ಅವರು ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ವಿಕೆಟ್‌ಗಳನ್ನು ಪಡೆದರು. ಈ ಮೂಲಕ ತಮ್ಮದೇ ದೇಶದ ದಂತಕತೆ ಅಲನ್ ಡೊನಾಲ್ಡ್ ಅವರ ದಾಖಲೆಯನ್ನು ಮುರಿದರು.

ಈ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆದ ರಬಾಡ ಅವರು ಆಸ್ಟ್ರೇಲಿಯದ ವಿರುದ್ಧ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ದಕ್ಷಿಣ ಆಫ್ರಿಕಾದ 2ನೇ ಬೌಲರ್ ಎನಿಸಿಕೊಂಡರು. ಇದೀಗ ಒಟ್ಟು 99 ವಿಕೆಟ್‌ಗಳನ್ನು ಪಡೆದು, ಏಕದಿನ, ಟೆಸ್ಟ್ ಕ್ರಿಕೆಟ್‌ನಲ್ಲಿ 98 ವಿಕೆಟ್‌ಗಳನ್ನು ಪಡೆದಿರುವ ಡೊನಾಲ್ಡ್ ಅವರ ದಾಖಲೆಯನ್ನು ಮುರಿದರು.

ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರು

- ಶೇನ್ ವಾರ್ನ್-69 ಪಂದ್ಯಗಳು, 190 ವಿಕೆಟ್‌ಗಳು

- ಡೇಲ್ ಸ್ಟೇಯ್ನ್-49 ಪಂದ್ಯಗಳು,127 ವಿಕೆಟ್‌ಗಳು

- ಗ್ಲೆನ್ ಮೆಕ್ಗ್ರಾತ್-58 ಪಂದ್ಯಗಳು, 115 ವಿಕೆಟ್‌ಗಳು

- ಕಾಗಿಸೊ ರಬಾಡ-38 ಪಂದ್ಯಗಳು, 99 ವಿಕೆಟ್‌ಗಳು

- ಅಲನ್ ಡೊನಾಲ್ಡ್-44 ಪಂದ್ಯಗಳು, 98 ವಿಕೆಟ್‌ಗಳು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News