×
Ad

ಕರ್ನಾಟಕ ಪ್ರೀಮಿಯರ್ ಲೀಗ್ | ಬೆಂಗಳೂರು ಬ್ಲಾಸ್ಟರ್ಸ್‌ಗೆ ಗೆಲುವು ; ಸಮಿತ್ ದ್ರಾವಿಡ್ ಆಲ್‌ರೌಂಡ್ ಆಟ

Update: 2026-07-05 23:07 IST

ಸಮಿತ್ ದ್ರಾವಿಡ್ 

ಬೆಂಗಳೂರು, ಜು.5: ಕೃಷ್ಣನ್ ಶ್ರೀಜಿತ್(ಔಟಾಗದೆ 57, 37 ಎಸೆತ) ಅರ್ಧಶತಕ ಹಾಗೂ ಸಮಿತ್ ದ್ರಾವಿಡ್(ಔಟಾಗದೆ 40, 25 ಎಸೆತ) ಆಲ್‌ರೌಂಡ್ ಆಟದ ನೆರವಿನಿಂದ ಮಹಾರಾಜ ಟಿ20 ಟ್ರೋಫಿಗಾಗಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮೈಸೂರು ವಾರಿಯರ್ಸ್ ತಂಡವನ್ನು ಎಂಟು ವಿಕೆಟ್‌ಗಳ ಅಂತರದಿಂದ ಮಣಿಸಿತು.

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಬೆಂಗಳೂರೂ ತಂಡವು ಮೈಸೂರು ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಮೈಸೂರು ತಂಡವು ನಿಶ್ಚಿತ್ ಎನ್.ರಾವ್(4-34), ಶುಭಾಂಗ್ ಹೆಗ್ಡೆ(2-19)ಹಾಗೂ ಸಮಿತ್ ದ್ರಾವಿಡ್(2-23) ಬೌಲಿಂಗ್ ದಾಳಿಗೆ ತತ್ತರಿಸಿ 19.4 ಓವರ್‌ಗಳಲ್ಲಿ 148 ರನ್ ಗಳಿಸಿ ಆಲೌಟಾಯಿತು.

ಗೆಲ್ಲಲು 149 ರನ್ ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು 14.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತು. ಸಮಿತ್ ದ್ರಾವಿಡ್ ಆಲ್‌ರೌಂಡ್ ಪ್ರದರ್ಶನ ನೀಡಿದರು. ನಿಶ್ಚಿತ್ ಜೆ.ರಾವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News