ಲಾರ್ಡ್ಸ್ ಟೆಸ್ಟ್ | ಇಂಗ್ಲೆಂಡ್ ಗೆಲುವಿಗೆ 457 ರನ್ ಗುರಿ ನೀಡಿದ ಭಾರತ
ಯಸ್ತಿಕಾ ಭಾಟಿಯಾ ಶತಕ, ಮಂಧಾನ, ರಿಚಾ ಅರ್ಧಶತಕ
ಯಸ್ತಿಕಾ ಭಾಟಿಯಾ | Photo Credit : ICC
ಲಾರ್ಡ್ಸ್, ಜು.12: ವಿಕೆಟ್‌ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಶತಕ(113 ರನ್, 158 ಎಸೆತ, 14 ಬೌಂಡರಿ), ಓಪನರ್ ಸ್ಮತಿ ಮಂಧಾನ(70 ರನ್, 130 ಎಸೆತ, 9 ಬೌಂಡರಿ)ಹಾಗೂ ರಿಚಾ ಘೋಷ್(ಔಟಾಗದೆ 50, 52 ಎಸೆತ, 8 ಬೌಂಡರಿ)ಅರ್ಧಶತಕಗಳ ಸಹಾಯದಿಂದ ಭಾರತದ ಮಹಿಳಾ ಕ್ರಿಕೆಟ್ ತಂಡವು ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ಗೆಲುವಿಗೆ 457 ರನ್ ಗುರಿ ನೀಡಿದೆ.
ಮೊದಲ ಇನಿಂಗ್ಸ್‌ನಲ್ಲಿ 115 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಮೂರನೇ ದಿನವಾದ ರವಿವಾರ 7 ವಿಕೆಟ್‌ಗಳ ನಷ್ಟಕ್ಕೆ 341 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಗೆಲುವಿಗೆ ಕಠಿಣ ಗುರಿ ನೀಡಿತು.
ಮಂಧಾನ ಹಾಗೂ ಶೆಫಾಲಿ ವರ್ಮಾ(33 ರನ್)ಮೊದಲ ವಿಕೆಟ್‌ನಲ್ಲಿ 88 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಶೆಫಾಲಿ ಔಟಾದ ನಂತರ ಮಂಧಾನ ಹಾಗೂ ಭಾಟಿಯಾ 2ನೇ ವಿಕೆಟ್‌ಗೆ 73 ರನ್ ಸೇರಿಸಿ ತಂಡವನ್ನು ಆಧರಿಸಿದರು. ವಿಕೆಟ್‌ಕೀಪರ್ ರಿಚಾ ಘೋಷ್ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಇಂಗ್ಲೆಂಡ್ ತಂಡದ ಬೌಲಿಂಗ್‌ನಲ್ಲಿ ಸೋಫಿ ಎಕ್ಲೆಸ್ಟೋನ್(5-118)ಯಶಸ್ವಿ ಪ್ರದರ್ಶನ ನೀಡಿದರು. ಲೌರೆನ್ ಬೆಲ್(2-27)ಎರಡು ವಿಕೆಟ್ ಪಡೆದರು.