×
Ad

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಗೆ ಹೀದರ್ ನೈಟ್ ನಿರ್ಧಾರ

Update: 2026-07-12 21:09 IST

ಹೀದರ್ ನೈಟ್ | Photo Credit : AP

ಲಂಡನ್, ಜು.12: ಭಾರತ ಹಾಗೂ ಇಂಗ್ಲೆಂಡ್ ನಡುವೆ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ನಂತರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಹೀದರ್ ನೈಟ್ ನಿರ್ಧರಿಸಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಪ್ರಕಟನೆಯ ಮೂಲಕ ನೈಟ್ ನಿರ್ಧಾರವನ್ನು ಬಹಿರಂಗಪಡಿಸಿದೆ.

ನೈಟ್ 2010ರಲ್ಲಿ ಇಂಗ್ಲೆಂಡ್ ತಂಡಕ್ಕೆ ಕಾಲಿಟ್ಟಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು(320)ಆಡಿದ ಇಂಗ್ಲೆಂಡ್ ಆಟಗಾರ್ತಿಯೆಂಬ ಹಿರಿಮೆಯೊಂದಿಗೆ ನಿವೃತ್ತಿಯಾಗಲಿದ್ದಾರೆ.

2016ರಿಂದ 2025ರ ತನಕ 199 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದ ನೈಟ್, 134 ಪಂದ್ಯಗಳಲ್ಲಿ ಜಯಶಾಲಿಯಾಗಿದ್ದರು. 2017ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಐಸಿಸಿ ಮಹಿಳೆಯರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಜಯಶಾಲಿಯಾಗಿತ್ತು.

ನೈಟ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಶತಕಗಳ ಸಹಿತ ಒಟ್ಟು 7,988 ರನ್ ಗಳಿಸಿದ್ದಾರೆ.2020ರಲ್ಲಿ ತನ್ನ ಚೊಚ್ಚಲ ಟಿ-20 ಶತಕ ಗಳಿಸಿದ್ದರು. ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News