×
Ad

ವಿಂಡೀಸ್‌, ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಪಾಕ್‌ ತಂಡದ ಫೀಲ್ಡಿಂಗ್‌ ಕೋಚ್‌ ಶೇನ್‌ ಮ್ಯಾಕ್‌ಡೆರ್ಮಾಟ್‌ ರಾಜೀನಾಮೆ

Update: 2026-07-12 19:18 IST

 ಶೇನ್‌ ಮ್ಯಾಕ್‌ಡೆರ್ಮಾಟ್‌ | Photo Credit : X

ಲಾಹೋರ್‌, ಜು. 12: ಮುಂಬರುವ ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್‌ ತಂಡದ ಫೀಲ್ಡಿಂಗ್‌ ಕೋಚ್‌ ಆಗಿದ್ದ ಆಸ್ಟ್ರೇಲಿಯಾದ ಶೇನ್‌ ಮ್ಯಾಕ್‌ಡೆರ್ಮಾಟ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸುಮಾರು ಒಂದು ವರ್ಷದಿಂದ ಪಾಕಿಸ್ತಾನ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಮ್ಯಾಕ್‌ಡೆರ್ಮಾಟ್‌, ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ಪ್ರವಾಸದಲ್ಲಿ ತಂಡದೊಂದಿಗೆ ಪ್ರಯಾಣ ಬೆಳೆಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ (ಪಿಸಿಬಿ) ನಿಕಟವಾಗಿರುವ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಮ್ಯಾಕ್‌ಡೆರ್ಮಾಟ್‌ ಅವರ ಬದಲಿಗೆ ಪಾಕಿಸ್ತಾನ ಶಹೀನ್ಸ್‌ ಹಾಗೂ ಅಂಡರ್‌–19 ತಂಡಗಳ ಫೀಲ್ಡಿಂಗ್‌ ಕೋಚ್‌ ಆಗಿರುವ ಮನ್ಸೂರ್‌ ಅಮ್ಜದ್‌ ಅವರನ್ನು ರಾಷ್ಟ್ರೀಯ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ನೇಮಿಸಲು ಪಿಸಿಬಿ ಆಸಕ್ತಿ ತೋರಿದೆ ಎಂದು ಮೂಲಗಳು ತಿಳಿಸಿವೆ.

‘ಪಾಕಿಸ್ತಾನ ಶಹೀನ್ಸ್‌ ಹಾಗೂ ಅಂಡರ್‌–19 ತಂಡಗಳ ಫೀಲ್ಡಿಂಗ್‌ ಕೋಚ್‌ ಆಗಿರುವ ಮನ್ಸೂರ್‌ ಅಮ್ಜದ್‌, ಶೇನ್‌ ಮ್ಯಾಕ್‌ಡೆರ್ಮಾಟ್‌ ಅವರ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನ ತಂಡವು ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲು ಸೋಮವಾರ ವೆಸ್ಟ್‌ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಆ ಬಳಿಕ ಇಂಗ್ಲೆಂಡ್‌ ವಿರುದ್ಧದ ಮೂರು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಆಡಲು ಇಂಗ್ಲೆಂಡ್‌ಗೆ ತೆರಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News