×
Ad

ಫಿಫಾ ವಿಶ್ವಕಪ್‌ಗಿಂತ ಮುನ್ನ ಮೆಸ್ಸಿಗೆ ಗಾಯದ ಭೀತಿ

Update: 2026-05-25 21:51 IST

 ಲಿಯೊನೆಲ್ ಮೆಸ್ಸಿ | Photo Credit : PTI 

ಮಯಾಮಿ, ಮೇ 25: ವಿಶ್ವಕಪ್ ಟೂರ್ನಿ ಆರಂಭವಾಗಲು ಕೆಲವೇ ವಾರಗಳ ಮೊದಲು ಲಿಯೊನೆಲ್ ಮೆಸ್ಸಿ ಗಾಯದ ಭೀತಿಗೆ ಒಳಗಾಗಿದ್ದಾರೆ.

ಕಾಲಿನ ಗಾಯದಿಂದಾಗಿ ರವಿವಾರ ಫಿಲಡೆಲ್ಫಿಯಾ ಯೂನಿಯನ್ ವಿರುದ್ಧದ ಇಂಟರ್ ಮಯಾಮಿಯ ಮೇಜರ್ ಲೀಗ್ ಸಾಕರ್(ಎಂಎಲ್‌ಎಸ್)ಪಂದ್ಯದಿಂದ ಮೆಸ್ಸಿ ನಿರ್ಗಮಿಸಿದ್ದಾರೆ.

ಅರ್ಜೆಂಟೀನದ ಸೂಪರ್‌ಸ್ಟಾರ್ ಮೆಸ್ಸಿಗೆ 73ನೇ ನಿಮಿಷದಲ್ಲಿ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಮೈದಾನವನ್ನು ತೊರೆದರು. ಈ ಪಂದ್ಯವನ್ನು ಮಯಾಮಿ 6-4 ಅಂತರದಿಂದ ಗೆದ್ದುಕೊಂಡಿದೆ.

ಐದು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದಿರುವ ಮೆಸ್ಸಿಗೆ ಗಂಭೀರ ಗಾಯವಾದರೆ, ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದಲ್ಲಿ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗಿಂತ ಮೊದಲು ಅರ್ಜೆಂಟೀನ ತಂಡ ತೀವ್ರ ಹಿನ್ನಡೆ ಅನುಭವಿಸಲಿದೆ.

ವಿಶ್ವಕಪ್ ಪಂದ್ಯಾವಳಿಯು ಜೂನ್ 11ರಂದು ಮೆಕ್ಸಿಕೊ ನಗರದಲ್ಲಿ ಆರಂಭವಾಗಲಿದ್ದು, ಐದು ದಿನಗಳ ನಂತರ ಅರ್ಜೆಂಟೀನ ತಂಡವು ಕಾನ್ಸಾಸ್‌ಸಿಟಿಯಲ್ಲಿ ಅಲ್ಜೀರಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಮೆಸ್ಸಿ ಅವರು ವಿಶ್ವಕಪ್‌ನಲ್ಲಿ ಆಡುವ ಯೋಜನೆಯ ಕುರಿತು ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಅವರು ದಾಖಲೆಯ ಆರನೇ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಮುಂದಿನ ವಾರ ಅರ್ಜೆಂಟೀನ ತಂಡವನ್ನು ಪ್ರಕಟಿಸಲಾಗುತ್ತದೆ. ಜೂನ್ 6ರಂದು ಹೊಂಡುರಾಸ್ ವಿರುದ್ಧ ವಿಶ್ವಕಪ್ ಪೂರ್ವ ಸ್ನೇಹಪರ ಪಂದ್ಯಗಳಿಗಾಗಿ ಟೆಕ್ಸಾಸ್‌ಗೆ ತೆರಳಲಿದೆ. ಜೂ.9ರಂದು ಐಸ್‌ಲ್ಯಾಂಡ್ ತಂಡದ ವಿರುದ್ಧ ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News