×
Ad

ಸರಕಾರಿ ಉದ್ಯೋಗವನ್ನು ನಿರಾಕರಿಸಿದ ಒಲಿಂಪಿಕ್ ಪದಕ ವಿಜೇತ ಶೂಟರ್ ಸರಬ್ಜೋತ್ ಸಿಂಗ್

Update: 2024-08-10 21:07 IST

ಸರಬ್ಜೋತ್ ಸಿಂಗ್ | PC : PTI 

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಶೂಟರ್ ಸರಬ್ಜೋತ್ ಸಿಂಗ್, ಹರಿಯಾಣ ಸರಕಾರ ಕ್ರೀಡಾ ಇಲಾಖೆಯಲ್ಲಿ ನೀಡಿರುವ ಉಪನಿರ್ದೇಶಕ ಹುದ್ದೆಯನ್ನು ನಿರಾಕರಿಸಿದ್ದಾರೆ. ಶೂಟಿಂಗ್ ನಲ್ಲಿ ಮುಂದುವರಿದು ಇನ್ನಷ್ಟು ಸಾಧನೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರುವೆ ಎಂದಿದ್ದಾರೆ.

ಸರಬ್ಜೋತ್ ಸಿಂಗ್ ಅವರು ತಮ್ಮ ಶೂಟಿಂಗ್ ವೃತ್ತಿಯ ಕಡೆ ಗಮನ ನೀಡಲು ಆದ್ಯತೆ ನೀಡಿದ್ದರಿಂದ, ಈ ಆಮಂತ್ರಣವನ್ನು ತಿರಸ್ಕರಿಸಿದ್ದಾರೆ. “ಉದ್ಯೋಗ ಚೆನ್ನಾಗಿದ್ದರೂ, ನಾನೀಗ ಸದ್ಯ ಅದನ್ನು ಮಾಡುವುದಿಲ್ಲ. ನನಗೆ ನನ್ನ ಶೂಟಿಂಗ್ ಕಡೆ ಮೊದಲು ಗಮನ ಹರಿಸಬೇಕಿದೆ” ಎಂದು ಸರಬ್ಜೋತ್ ಸಿಂಗ್ ಹೇಳಿದ್ದಾರೆ. ಸ್ಥಿರ ಉದ್ಯೋಗವೊಂದನ್ನು ಪಡೆಯುವಂತೆ ನನ್ನ ಕುಟುಂಬದ ಸದಸ್ಯರಿಂದ ಒತ್ತಡವಿದೆ ಎಂಬುದನ್ನು ಒಪ್ಪಿಕೊಂಡ ಅವರು, ಹೀಗಿದ್ದೂ ನಾನು ಕ್ರೀಡೆಯ ಕಡೆ ಗಮನ ಹರಿಸುವುದಾಗಿ ಸ್ವಷ್ಟಪಡಿಸಿದ್ದಾರೆ.

“ನನ್ನ ಕುಟುಂಬದ ಸದಸ್ಯರು ನನಗೆ ಉದ್ಯೋಗವೊಂದನ್ನು ಪಡೆಯುವಂತೆ ಸೂಚಿಸುತ್ತಿದ್ದಾರೆ. ಆದರೆ, ನನಗೆ ಶೂಟಿಂಗ್ ಬೇಕಿದೆ. ನಾನು ಮಾಡಿರುವ ಕೆಲವು ನಿರ್ಧಾರಗಳ ವಿರುದ್ಧ ಹೋಗುವುದು ನನಗೆ ಬೇಕಿಲ್ಲ. ಹೀಗಾಗಿ ನಾನು ಸದ್ಯ ಉದ್ಯೋಗ ಮಾಡಲಾರೆ” ಎಂದೂ ಅವರು ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆದ 10 ಮೀಟರ್ ಪಿಸ್ತೂಲ್ ಮಿಶ್ರ ತಂಡದ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ನಂತರ, ಸರಬ್ಜೋತ್ ಸಿಂಗ್ ರಿಂದ ಈ ನಿರ್ಧಾರ ಹೊರ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News