ನಾರ್ವೆ ಚೆಸ್ 2026 | ಗುಕೇಶ್, ಪ್ರಜ್ಞಾನಂದಗೆ ಗೆಲುವು: ಮೊದಲ ಸುತ್ತಿನಲ್ಲಿ ಮುಗ್ಗರಿಸಿದ ಕಾರ್ಲ್ಸನ್
Update: 2026-05-27 00:08 IST
Photo Credit: Norway Chess
ಒಸ್ಲೊ, ಮೇ 26: ವಿಶ್ವ ಚಾಂಪಿಯನ್ ಡಿ.ಗುಕೇಶ್ ನಾರ್ವೆ ಚೆಸ್-2026ರ ಕ್ಲಾಸಿಕಲ್ ಗೇಮ್‌ನ ಮೊದಲ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೇಮರ್ ವಿರುದ್ಧ ಗೆಲುವು ಸಾಧಿಸಿ ತನ್ನ ಅಭಿಯಾನ ಆರಂಭಿಸಿದ್ದಾರೆ.
ಗುಕೇಶ್ ಅವರ ಸಹ ಆಟಗಾರ ಪ್ರಜ್ಞಾನಂದ ಕೂಡ ಅಮೆರಿಕದ ವೆಸ್ಲೆ ಸೋ ವಿರುದ್ಧ ಗೆಲುವಿನ ಆರಂಭ ಪಡೆದಿದ್ದಾರೆ.
ಫ್ರಾನ್ಸ್ನ ಗ್ರ್ಯಾಂಡ್ಮಾಸ್ಟರ್ ಅಲಿರೆಝಾ ಫಿರೌಝಿಯಾ ವಿಶ್ದದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದರು. ಕಾರ್ಲ್ಸನ್ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದರು. ಆದರೆ ಪ್ರಮುಖ ಸಂದರ್ಭದಲ್ಲಿ ತಪ್ಪೆಸಗಿ ಎದುರಾಳಿಗೆ ಅವಕಾಶ ಮಾಡಿಕೊಟ್ಟರು.
ಮಹಿಳೆಯರ ಸ್ಪರ್ಧೆಯಲ್ಲಿ ಭಾರತೀಯ ಗ್ರ್ಯಾಂಡ್ಮಾಸ್ಟರ್ ದಿವ್ಯಾ ದೇಶಮುಖ್ ಅವರು ಚೀನಾದ ವಿಶ್ವ ಚಾಂಪಿಯನ್ ಜು ವೆನ್ಜುನ್ರನ್ನು ಮಣಿಸಿ ಶಾಕ್ ನೀಡಿದರು.