×
Ad

IPL-2026| ಮುಹಮ್ಮದ್ ಶಮಿ ದಾಖಲೆ ಮುರಿದ ಕಾಗಿಸೊ ರಬಾಡ

Update: 2026-05-26 23:43 IST

Photo : x@gujarat_titans

ಹೊಸದಿಲ್ಲಿ, ಮೇ 26: ಆರ್‌ಸಿಬಿ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವೇಗದ ಬೌಲರ್ ಕಾಗಿಸೊ ರಬಾಡ ಹೊಸ ದಾಖಲೆ ನಿರ್ಮಿಸಿದರು.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ರಬಾಡ ಅವರು ವೆಂಕಟೇಶ ಅಯ್ಯರ್ ವಿಕೆಟನ್ನು ಉರುಳಿಸಿ ಒಂದೇ ಐಪಿಎಲ್ ಟೂರ್ನಿಯಲ್ಲಿ ಪವರ್ಪ್ಲೇನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.

ರಬಾಡ ಸ್ಟಂಪ್ ಗುರಿಯಾಗಿಸಿ ಸತತವಾಗಿ ಲೆಂಗ್ತ್ ಎಸೆತವನ್ನು ಎಸೆದಿದ್ದು ಅಯ್ಯರ್ ಆಕ್ರಮಣಕಾರಿ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಮಿಡ್ ಆಫ್ನಲ್ಲಿದ್ದ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್, ರನ್ನಿಂಗ್ ಕ್ಯಾಚ್ ಪೂರ್ಣಗೊಳಿಸಿದರು.

ಅಯ್ಯರ್ ವಿಕೆಟನ್ನು ಪಡೆದ ರಬಾಡ ಅವರು ಮುಹಮ್ಮದ್ ಶಮಿ ದಾಖಲೆಯನ್ನು ಮುರಿದರು. ಶಮಿ 2023ರ ಐಪಿಎಲ್ ಋತುವಿನ ಪವರ್ಪ್ಲೇನಲ್ಲಿ ಒಟ್ಟು 17 ವಿಕೆಟ್‌ಗಳನ್ನು ಉರುಳಿಸಿದ್ದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ಗುಜರಾತ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಗುಜರಾತ್ ತಂಡ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಿದ್ದು, ಅರ್ಷದ್ ಖಾನ್ ಬದಲಿಗೆ ಕುಲ್ವಂತ್ ಖೆಜ್ರೊಲಿಯಾ ಅವಕಾಶ ಪಡೆದರು.

ಆರ್‌ಸಿಬಿ ಕೂಡ ಒಂದು ಬದಲಾವಣೆ ಮಾಡಿದ್ದು, ರೊಮಾರಿಯೊ ಶೆಫರ್ಡ್ ಬದಲಿಗೆ ಜೇಕಬ್ ಡಫಿ ಅವರನ್ನು ಸೇರಿಸಿಕೊಂಡರು.

ಐಪಿಎಲ್‌ನ ಮೊದಲ ಆರು ಓವರ್‌ಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳು

18 ವಿಕೆಟ್ - ಕಾಗಿಸೊ ರಬಾಡ (2026)

17 - ಮುಹಮ್ಮದ್ ಶಮಿ (2023)

16 - ಮಿಚೆಲ್ ಜಾನ್ಸನ್ (2013)

16 - ಟ್ರೆಂಟ್ ಬೌಲ್ಟ್ (2020)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News