IPL ಪ್ಲೇ ಆಫ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಗಳಿಸಿದ RCB
Update: 2026-05-27 00:00 IST
Photo : @RCBTweets
ಹೊಸದಿಲ್ಲಿ, ಮೇ 26: RCB ತಂಡವು ಮಂಗಳವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಹತ್ವದ ದಾಖಲೆ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ RCB ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 254 ರನ್ ಗಳಿಸಿದೆ. ಈ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ.
2023ರ ಆವೃತ್ತಿಯಲ್ಲಿ ಅಹ್ಮದಾಬಾದ್ನಲ್ಲಿ ನಡೆದಿದ್ದ ಎರಡನೇ ಕ್ವಾಲಿಫೈಯರ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗಳಿಸಿದ್ದ 3 ವಿಕೆಟ್ ಗಳ ನಷ್ಟಕ್ಕೆ 233 ರನ್ಗಳ ದಾಖಲೆಯನ್ನು RCB ಮುರಿದಿದೆ.
►ಐಪಿಎಲ್ ಪ್ಲೇಆಫ್ ನಲ್ಲಿ ಗರಿಷ್ಠ ಮೊತ್ತಗಳು:
254/5: RCB-ಗುಜರಾತ್ ಟೈಟಾನ್ಸ್, ಧರ್ಮಶಾಲಾ, 2026
233/3: ಗುಜರಾತ್-ಮುಂಬೈ, ಅಹ್ಮದಾಬಾದ್, 2023
228/5: ಮುಂಬೈ-ಗುಜರಾತ್, ನ್ಯೂ ಚಂಡೀಗಢ, 2025
226/6: ಪಂಜಾಬ್-ಸಿಎಸ್ಕೆ, ಮುಂಬೈ, 2014
222/5: ಸಿಎಸ್ಕೆ-ಡೆಲ್ಲಿ, ಚೆನ್ನೈ, 2012