×
Ad

ಡೆಲ್ಲಿ ಕ್ಯಾಪಿಟಲ್ಸ್ ನಿಂದ ಎಂಗಿಡಿ ಹೊರಗೆ | ಅವರ ಸ್ಥಾನಕ್ಕೆ ಆಸ್ಟ್ರೇಲಿಯ ಆಲ್ರೌಂಡರ್ ಮೆಕ್ ಗುರ್ಕ್

Update: 2024-03-15 22:38 IST

ಜೇಕ್ ಫ್ರೇಸರ್ ಮೆಕ್ ಗುರ್ಕ್ | Photo: NDTV 

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಋತು ಆರಂಭಗೊಳ್ಳಲು ಒಂದು ವಾರ ಉಳಿದಿರುವಂತೆಯೇ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿಸಾನಿ ಎಂಗಿಡಿ ತಂಡದಿಂದ ಹೊರಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಶುಕ್ರವಾರ ದಕ್ಷಿಣ ಆಫ್ರಿಕದ ವೇಗಿಯ ಸ್ಥಾನಕ್ಕೆ ಆಸ್ಟ್ರೇಲಿಯದ ಆಲ್ರೌಂಡರ್ ಜೇಕ್ ಫ್ರೇಸರ್ ಮೆಕ್ ಗುರ್ಕ್ ಅವರನ್ನು ಹೆಸರಿಸಿದೆ.

ಗಾಯದಿಂದ ಬಳಲುತ್ತಿರುವ ಎಂಗಿಡಿ ಐಪಿಎಲ್ ನ ಹಾಲಿ ಋತುವಿನಲ್ಲಿ ಆಡುವುದಿಲ್ಲ ಎಂದು ಐಪಿಎಲ್ ಶುಕ್ರವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ. ತಂಡದಲ್ಲಿ ಎಂಗಿಡಿ ಸ್ಥಾನವನ್ನು ಮೆಕ್ಗರ್ಕ್ ತುಂಬಿದ್ದಾರೆ ಎಂದು ಅದು ಹೇಳಿದೆ. ಮೆಕ್ಗರ್ಕ್ 50 ಲಕ್ಷ ರೂಪಾಯಿ ಮೀಸಲು ಬೆಲೆಯನ್ನು ಹೊಂದಿದ್ದಾರೆ.

“ಮುಂಬರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಲುಂಗಿಸಾನಿ ಎಂಗಿಡಿಯ ಬದಲಿಗೆ ಜೇಕ್ ಫ್ರೇಸರ್ ಮೆಕ್ಗರ್ಕ್ ಆಡಲಿದ್ದಾರೆ. 14 ಐಪಿಎಲ್ ಪಂದ್ಯಗಳಲ್ಲಿ ಆಡಿ 25 ವಿಕೆಟ್ ಗಳನ್ನು ಪಡೆದಿರುವ ಎಂಗಿಡಿ ಗಾಯದಿಂದಾಗಿ ಈ ಬಾರಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಜೇಕ್ ಫ್ರೇಸರ್-ಮೆಕ್ಗರ್ಕ್ ಆಸ್ಟ್ರೇಲಿಯಕ್ಕಾಗಿ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ತನ್ನ ಮೀಸಲು ಬೆಲೆ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ'' ಎಂದು ಐಪಿಎಲ್ ಹೇಳಿದೆ.

ಕಳೆದ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 10 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿತ್ತು. ಅದು ಐದು ಪಂದ್ಯಗಳನ್ನು ಗೆದ್ದರೆ, ಒಂಭತ್ತು ಪಂದ್ಯಗಳಲ್ಲಿ ಸೋಲನುಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News