×
Ad

ವಿಕೆಟ್ ಗಳಿಕೆಯಲ್ಲಿ ಶತಕ ಪೂರೈಸಿದ ಪಾಕಿಸ್ತಾನದ ವೇಗಿ ಶಾಹೀನ್ ಶಾಹೀನ್ ಅಫ್ರಿದಿ

Update: 2023-10-31 23:57 IST

Photo  : PTI 

ಹೊಸದಿಲ್ಲಿ: ಕೋಲ್ಕತಾದಲ್ಲಿ ಮಂಗಳವಾರ ಬಾಂಗ್ಲಾದೇಶ ವಿರುದ್ಧದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 100ನೇ ವಿಕೆಟ್ ಮೈಲಿಗಲ್ಲು ತಲುಪಿದ್ದಾರೆ.

23ರ ಹರೆಯದ ಶಾಹೀನ್ ತನ್ನ ಮೊದಲ ಓವರ್ ನ ಐದನೇ ಎಸೆತದಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ತಂಝೀದ್ ಹಸನ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ವಾಪಸ್ ಕಳುಹಿಸಿದರು. ಈ ಮೂಲಕ ತನ್ನ 51ನೇ ಏಕದಿನ ಪಂದ್ಯದಲ್ಲಿ 100ನೇ ವಿಕೆಟನ್ನು ಪಡೆದರು.

ಶಾಹೀನ್ ಇದೀಗ ಏಕದಿನ ಕ್ರಿಕೆಟ್ ನಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದ ಪಾಕಿಸ್ತಾನದ ಬೌಲರ್ ಗಳಿರುವ ಪ್ರತಿಷ್ಠಿತ ಗ್ರೂಪ್ಗೆ ಸೇರಿದರು. ಗ್ರೂಪ್ನಲ್ಲಿ 21ನೇ ಆಟಗಾರನಾಗಿದ್ದಾರೆ. ವೇಗದ ಬೌಲಿಂಗ್ ದಂತಕತೆ ವಸೀಂ ಅಕ್ರಂ 356 ಪಂದ್ಯಗಳಲ್ಲಿ 502 ವಿಕೆಟ್ಗಳನ್ನು ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.

ಶಾಹೀನ್ 2018ರಲ್ಲಿ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುವುದರೊಂದಿಗೆ ಏಕದಿನ ಕ್ರಿಕೆಟಿಗೆ ಕಾಲಿಟ್ಟಿದ್ದರು. ಆ ನಂತರ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಓರ್ವ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಶಾಹೀನ್ 27 ಟೆಸ್ಟ್ ಪಂದ್ಯಗಳಲ್ಲಿ 105 ವಿಕೆಟ್ ಗಳನ್ನು ಹಾಗೂ 52 ಟ್ವೆಂಟಿ-20 ಪಂದ್ಯಗಳಲ್ಲಿ 64 ವಿಕೆಟ್ಗಳನ್ನು ಕಬಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News