×
Ad

ಪ್ಯಾರಾಲಿಂಪಿಕ್ಸ್ ಗೆ ಆತಿಥ್ಯವಹಿಸಲು ಪ್ಯಾರಿಸ್ ಸಜ್ಜು

Update: 2024-08-27 21:36 IST

The 2024 Paralympics logo

ಪ್ಯಾರಿಸ್ : ಬೆಳಕಿನ ನಗರಿ ಪ್ಯಾರಿಸ್ ಇದೇ ಮೊದಲ ಬಾರಿ ಬೇಸಿಗೆಯ ಪ್ಯಾರಾಲಿಂಪಿಕ್ ಗೇಮ್ಸ್‌ ನ ಆತಿಥ್ಯವಹಿಸಲು ಸಜ್ಜಾಗಿದ್ದು, ಗೇಮ್ಸ್ ಆಗಸ್ಟ್ 28ರಿಂದ ಆರಂಭವಾಗಿ ಸೆಪ್ಟಂಬರ್ 8ರಂದು ಮುಕ್ತಾಯವಾಗಲಿದೆ. ವಿಶ್ವದ ಶ್ರೇಷ್ಠ ವಿಕಲಚೇತನ ಅಥ್ಲೀಟ್‌ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಫ್ರಾನ್ಸ್ ರಾಜಧಾನಿಯಲ್ಲಿ ಒಟ್ಟಿಗೆ ಸೇರಿದ್ದಾರೆ.

ಪ್ಯಾರಾಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರೂ ಚಾಂಪಿಯನ್ನರೇ. ಏಕೆಂದರೆ ಅವರೆಲ್ಲ ಈಗಾಗಲೇ ಜೀವನದ ಹೋರಾಟದಲ್ಲಿ ಗೆದ್ದಾಗಿದೆ. ಜಾಗತಿಕಮಟ್ಟದ ಕ್ರೀಡಾಕೂಟದಲ್ಲಿ ಸಿಗುವ ಪದಕ ಅವರ ಸಾಧನೆಯ ಕಿರೀಟದ ಮೇಲೆ ಮತ್ತೊಂದು ಗರಿಯಾಗಲಿದೆ.

ಪ್ಯಾರಿಸ್‌ನಲ್ಲಿ ಮೊದಲ ಬಾರಿ ಪ್ಯಾರಾಲಿಂಪಿಕ್ಸ್ ನಡೆಯುತ್ತಿರುವ ಕಾರಣ ಇದೊಂದು ವಿಶೇಷವಾಗಿದ್ದು ಸ್ಟೇಡಿಯಮ್‌ ನಿಂದ ಹೊರಗೆ ಇದೇ ಮೊದಲ ಬಾರಿ ವಿಭಿನ್ನವಾಗಿ ಉದ್ಘಾಟನೆ ಕಾರ್ಯಕ್ರಮ ನಡೆಸಲು ಫ್ರಾನ್ಸ್ ರಾಜಧಾನಿ ಸಜ್ಜಾಗಿದೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಭಾರತದ ಕಾಲಮಾನ ಬುಧವಾರ ರಾತ್ರಿ 11:30ಕ್ಕೆ ಆರಂಭವಾಗಲಿದೆ.

ಸುಮಿತ್ ಅಂತಿಲ್ ಹಾಗೂ ಭಾಗ್ಯಶ್ರೀ ಯಾದವ್ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

ಪ್ಯಾರಾಲಿಂಪಿಕ್ಸ್ ಸ್ಪರ್ಧೆಗಳು ಭಾರತದ ಕಾಲಮಾನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಇದು ಮಧ್ಯರಾತ್ರಿಯ ತನಕ ನಡೆಯಲಿದೆ.

ಉದ್ಘಾಟನಾ ಸಮಾರಂಭವು ಸ್ಪೋಟ್ಸ್‌18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

ವಿಶ್ವದಾದ್ಯಂತದ ಸುಮಾರು 4,400 ಅಥ್ಲೀಟ್‌ಗಳು 22 ವಿವಿಧ ಕ್ರೀಡೆಗಳಲ್ಲಿ 549 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತವು 12 ಸ್ಪರ್ಧೆಗಳಲ್ಲಿ ಭಾಗವಹಿಸಲಿದೆ. ಪ್ಯಾರಾಲಿಂಪಿಕ್ಸ್ ವಿಕಲಾಂಗ ವ್ಯಕ್ತಿಗಳಿಗೆ ತಮ್ಮ ಅಸಾಧಾರಣ ಪ್ರತಿಭೆಯನ್ನು ತೋರಿಸಲು ಅವಕಾಶಗಳನ್ನು ಒದಗಿಸುತ್ತದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಾರು 167 ದೇಶಗಳು ಪ್ರತಿನಿಧಿಸಲಿದ್ದು, ಇದರಲ್ಲಿ ತಟಸ್ಥ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು(ರಶ್ಯ ಹಾಗೂ ಬೆಲಾರುಸ್‌ ನ ಪ್ಯಾರಾ ಅಥ್ಲೀಟ್‌ಗಳು)ಹಾಗೂ ನಿರಾಶ್ರಿತರ ಪ್ಯಾರಾಲಿಂಪಿಕ್ಸ್ ತಂಡಗಳೂ ಇವೆ.

►ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಭರವಸೆ ಮೂಡಿಸಿರುವ ಕ್ರೀಡಾಳುಗಳು

ಸುಮಿತ್ ಅಂತಿಲ್(ಜಾವೆಲಿನ್ ಎಸೆತ), ಅವನಿ ಲೇಖರ(ಶೂಟಿಂಗ್), ಮನಿಶ್ ನರ್ವಾಲ್(ಶೂಟಿಂಗ್) ,ಕೃಷ್ಣ ನಗರ್(ಬ್ಯಾಡ್ಮಿಂಟನ್) ಹಾಗೂ ಶೀತಲ್ ದೇವಿ(ಆರ್ಚರಿ). 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News