×
Ad

ಪ್ಯಾರಿಸ್ ಒಲಿಂಪಿಕ್ಸ್ | ಬೋಪಣ್ಣ ಜೊತೆ ಡಬಲ್ಸ್ ಆಡಲಿರುವ ಬಾಲಾಜಿ

Update: 2024-06-13 22:08 IST

ರೋಹನ್ ಬೋಪಣ್ಣ | PC : PTI 


ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್‌ ನ ಟೆನಿಸ್ ಸ್ಪರ್ಧೆಯಲ್ಲಿ, ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಜೊತೆಯಾಗಿ ಆಡುವರು ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಗುರುವಾರ ಖಚಿತಪಡಿಸಿದೆ.

ಒಲಿಂಪಿಕ್ಸ್‌ ನಲ್ಲಿ ತನ್ನ ಜೊತೆ ಆಟಗಾರನಾಗಿ ಬೋಪಣ್ಣ, ಬಾಲಾಜಿಯನ್ನು ಆಯ್ಕೆ ಮಾಡಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿತ್ತು.

“ಪ್ಯಾರಿಸ್ ಒಲಿಂಪಿಕ್ಸ್ 2024ರ ಟೆನಿಸ್ ಡಬಲ್ಸ್ ಸ್ಪರ್ಧೆಯಲ್ಲಿ ಆಡಲು ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಅರ್ಹತೆ ಗಳಿಸಿದ್ದಾರೆ ಎಂದು ಘೊಷಿಸಲು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ ಸಂತೋಷ ಪಡುತ್ತದೆ’’ ಎಂದು ಎಐಟಿಎ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಡೇವಿಸ್ ಕಪ್ ತಂಡದ ಮಾಜಿ ನಾಯಕ ನಂದನ್ ಬಾಲ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತದ ಎರಡನೇ ಶ್ರೇಣಿಯ ಡಬಲ್ಸ್ ಆಟಗಾರ ಯೂಕಿ ಭಾಂಬ್ರಿ ಕೂಡ ಸ್ಪರ್ಧೆಯಲ್ಲಿದ್ದರು ಎಂದು ಎಐಟಿಎ ಮೂಲಗಳು ತಿಳಿಸಿವೆ. ಆದರೆ ಮೈದಾನದಲ್ಲಿ ವೇಗವಾಗಿ ಚಲಿಸುವ ಬಾಲಾಜಿಯ ಸಾಮಥ್ರ್ಯವು ಅವರಿಗೆ ಪೂರಕವಾಯಿತು.

ಭಾರತೀಯ ಟೆನಿಸ್ ತಂಡದ ಕೋಚ್ ಆಗಿ ಬಾಲಚಂದ್ರನ್ ಮಣಿಕ್ಕಾತ್ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ರೆಬೆಕಾ ವಾನ್ ಓರ್ಶೇಜನ್ ತಂಡದ ಫಿಸಿಯೊಥೆರಪಿಸ್ಟ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News