×
Ad

ಪ್ರೊ ಕಬಡ್ಡಿ ಲೀಗ್ | ದಬಾಂಗ್ ಡೆಲ್ಲಿ ತಂಡ ಚಾಂಪಿಯನ್

ಪುಣೇರಿ ಪಲ್ಟನ್ ವಿರುದ್ಧ ರೋಚಕ ಜಯ

Update: 2025-10-31 22:34 IST

PC: @ProKabaddi | Twitter

ಹೊಸದಿಲ್ಲಿ, ಅ.31: ಪುಣೇರಿ ಪಲ್ಟನ್ ತಂಡವನ್ನು 31-28 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿದ ದಬಾಂಗ್ ಡೆಲ್ಲಿ ತಂಡವು 12ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2ನೇ ಬಾರಿ ಪ್ರೊ ಕಬಡ್ಡಿ ಲೀಗ್ ಟ್ರೋಫಿ ಗೆದ್ದುಕೊಂಡಿದೆ. ಹಲವು ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಪೈರೇಟ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳನ್ನು ಸೇರಿಕೊಂಡಿದೆ.

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡದ ಪರ ನೀರಜ್ ನರ್ವಾಲ್ 9 ಅಂಕ ಗಳಿಸಿದರು. ಅಜಿಂಕ್ಯ ಪವರ್ ಆರಂಕ ಕಲೆ ಹಾಕಿದರು.

ರನ್ನರ್ ಅಪ್‌ಗೆ ತೃಪ್ತಿಪಟ್ಟ ಪುಣೇರಿ ತಂಡದ ಪರ ಆದಿತ್ಯ ಶಿಂದೆ 10 ಅಂಕ ಗಳಿಸಿದರು.

ಡೆಲ್ಲಿಯ ಅಮೋಘ ಪ್ರದರ್ಶನಕ್ಕೆ ನೆರವಾಗಿರುವ ಇರಾನಿನ ಸುಲ್ತಾನ್ ಫಝಲ್ 12ನೇ ಆವೃತ್ತಿಯ ಪಿಕೆಎಲ್‌ನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರು ಬುಲ್ಸ್ ತಂಡದ ದೀಪಕ್ ಶಂಕರ್ ಪಂದ್ಯಾವಳಿಯ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಪಡೆದರು.

ಡೆಲ್ಲಿಯ ಜಗಿಂದರ್ ನರ್ವಾಲ್ ಅವರು ಮನ್‌ಪ್ರಿತ್ ಸಿಂಗ್ ನಂತರ ನಾಯಕ ಹಾಗೂ ಕೋಚ್ ಆಗಿ ಪಿಕೆಎಲ್ ಟ್ರೋಫಿ ಗೆದ್ದಿರುವ ಏಕೈಕ ವ್ಯಕ್ತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News