×
Ad

ಕ್ವೀನ್ಸ್ ಕ್ಲಬ್ ಚಾಂಪಿಯನ್ಶಿಪ್: ಕಾರ್ಲೊಸ್ ಅಲ್ಕರಾಝ್ ಫೈನಲ್ ಗೆ

Update: 2023-06-25 23:46 IST

ಲಂಡನ್: ಅಮೆರಿಕದ ಶ್ರೇಯಾಂಕರಹಿತ ಆಟಗಾರ ಸೆಬಾಸ್ಟಿಯನ್ ಕೊರ್ಡಾರನ್ನು ಮಣಿಸಿದ ಸ್ಪೇನ್ನ ಕಾರ್ಲೊಸ್ ಅಲ್ಕರಾಝ್ ಕ್ವೀನ್ಸ್ ಕ್ಲಬ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ 20ರ ಹರೆಯದ ಅಲ್ಕರಾಝ್ ಬಲಿಷ್ಠ ಆಟಗಾರ ಕೊರ್ಡಾರನ್ನು 6-3, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿದರು.

ಹುಲ್ಲುಹಾಸಿನ ಅಂಗಣದಲ್ಲಿ ಮೊದಲ ಬಾರಿ ಎಟಿಪಿ ಟೂರ್ ಫೈನಲ್ಗೆ ತಲುಪಿರುವ ಅಲ್ಕರಾಝ್ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ರನ್ನು ಎದುರಿಸಲಿದ್ದಾರೆ. ಮಿನೌರ್ ಡೆನ್ಮಾರ್ಕ್ನ 2ನೇ ಶ್ರೇಯಾಂಕದ ಹೋಲ್ಗರ್ ರೂನ್ರನ್ನು 6-3, 7-6(2) ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.

ಅಲ್ಕರಾಝ್ ಒಂದು ವೇಳೆ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದರೆ, ನೊವಾಕ್ ಜೊಕೊವಿಕ್ರಿಂದ ಎಟಿಪಿ ನಂ.1 ರ್ಯಾಂಕನ್ನು ವಶಪಡಿಸಿಕೊಳ್ಳಲಿದ್ದಾರೆ. ಜುಲೈ 3ರಿಂದ ಆರಂಭವಾಗಲಿರುವ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಅಗ್ರ ಶ್ರೇಯಾಂಕವನ್ನು ಪಡೆಯಲಿದ್ದಾರೆ.

ವಿಶ್ವದ ನಂ.18ನೇ ಆಟಗಾರ ಮಿನೌರ್ ಈ ವಾರಾರಂಭದಲ್ಲಿ ಲೋಕಲ್ ಫೇವರಿಟ್ 

ಆ್ಯಂಡಿ ಮರ್ರೆ ಅವರನ್ನು ಸೋಲಿಸಿದ್ದು,

ವೃತ್ತಿಜೀವನದಲ್ಲಿ ಎರಡನೇ ಬಾರಿ ಹುಲ್ಲುಹಾಸಿನ ಅಂಗಣದಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. 2021ರಲ್ಲಿ ಈಸ್ಟ್ಬೌರ್ನ್ನಲ್ಲಿ ಈ ಸಾಧನೆ ಮಾಡಿದ್ದರು.

ಮಿನೌರ್ 17 ವರ್ಷಗಳ ನಂತರ ವಿಂಬಲ್ಡನ್

ಪೂರ್ವ ಟೂರ್ನಿ ಕ್ವೀನ್ಸ್ ಕ್ಲಬ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿದ ಆಸ್ಟ್ರೇಲಿಯದ ಮೊದಲ ಆಟಗಾರನಾಗಿದ್ದಾರೆ. ಲೆಟನ್ ಹೆವಿಟ್ 2006ರಲ್ಲಿ ಈ ಸಾಧನೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News