×
Ad

ಪಾಕಿಸ್ತಾನದ ವಿರುದ್ಧ ಅರ್ಧ ಶತಕ ಬಾರಿಸಿದ ರೋಹಿತ್ ಶರ್ಮಾ

Update: 2023-10-14 19:02 IST

Photo : cricketworldcup.com

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 12 ನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದೆ.

ಪಾಕಿಸ್ತಾನ ನೀಡಿದ 192 ರನ್ ಅಲ್ಪ ಮೊತ್ತ ಬೆನ್ನತ್ತಲು ಬ್ಯಾಟಿಂಗ್ ಗೆ ಬಂದ ಭಾರತೀಯ ಬ್ಯಾಟರ್ಸ್ ತಂಡಕ್ಕೆ ಉತ್ತಮ ಆರಂಭ ನೀಡಲು ವಿಫಲರಾದರು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ 16 ರನ್ ಗೆ ಶಾಹೀನ್ ಆಫ್ರಿದಿಗೆ ವಿಕೆಟ್ ಒಪ್ಪಿಸುವುದರ ಮೂಲಕ ಆಘಾತ ಭಾರತ ತಂಟ ಎದುರಿಸಿತು. ಬಳಿಕ ಜೊತೆಯಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಕ್ ಬೌಲಿಂಗ್ ನ್ನು ಸಮರ್ಥ ವಾಗಿ ಎದುರಿಸುವ ಪ್ರಯತ್ನ ಮಾಡಿದರು. ಆದರೆ ವಿರಾಟ್ ಕೊಹ್ಲಿ 16 ರನ್ ಗೆ ಹಸನ್ ಅಲಿ ಬೌಲಿಂಗ್ ನಲ್ಲಿ ಔಟ್ ಆದರು. ಸದ್ಯ ರೋಹಿತ್ ಶರ್ಮಾ 36 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 50 ರನ್ ಗಳಿಸುವ ಮೂಲಕ ಅರ್ಧ ಶತಕ ದಾಖಲಿಸಿದರು. ಶ್ರೇಯಸ್ ಅಯ್ಯರ್ 16 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಭಾರತಕ್ಕೆ 35 ಓವರ್ ನಲ್ಲಿ 81 ರನ್ ಗಳ ಅವಶ್ಯತಕೆತಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News