ಏಶ್ಯನ್ ಗೇಮ್ಸ್: ಶೂಟಿಂಗ್‌ನಲ್ಲಿ 2ನೇ ಪದಕಕ್ಕೆ ಕೊರಳೊಡ್ಡಿದ ಕರ್ನಾಟಕದ ದಿವ್ಯಾ
Update: 2023-09-30 11:32 IST
ಹ್ಯಾಂಗ್‌ಝೌ: ಭಾರತದ ಸರಬ್‌ಜೋತ್ ಸಿಂಗ್ ಮತ್ತು ಕರ್ನಾಟಕದ ದಿವ್ಯಾ ಟಿ.ಎಸ್. ಏಶ್ಯನ್ ಗೇಮ್ಸ್‌ನಲ್ಲಿ ಶನಿವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾದ ಶೂಟರ್‌ಗಳಾದ ಜಾಂಗ್ ಬೋವೆನ್ ಮತ್ತು ಜಿಯಾಂಗ್ ರಾಂಕ್‌ಸಿನ್ ಜೋಡಿ ತಂಡವು ಚಿನ್ನದ ಪದಕ ತಮ್ಮದಾಗಿಸಿವೆ.
ಶುಕ್ರವಾರ ದಿವ್ಯಾ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಗೆದ್ದಿದ್ದರು.
ಈ ಮೂಲಕ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ 6 ಚಿನ್ನ, 8 ಬೆಳ್ಳಿ ಮತ್ತು 5 ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿದೆ.