ನಿಧಾನಗತಿಯ ಬೌಲಿಂಗ್: ಭಾರತ, ವೆಸ್ಟ್‌ಇಂಡೀಸ್ ತಂಡಗಳಿಗೆ ದಂಡ
Photo Credit : PTI
ಹೊಸದಿಲ್ಲಿ: ನ್ಯೂ ಚಂಡಿಗಡದಲ್ಲಿ ಶನಿವಾರ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳಿಗೆ ದಂಡ ವಿಧಿಸಲಾಗಿದೆ.
ನಿಗದಿತ ಸಮಯದ ವಿನಾಯಿತಿಗಳನ್ನು ಪರಿಗಣಿಸಿದ ನಂತರವೂ ಭಾರತ ತಂಡವು ನಿಗದಿತ ಓವರ್ ದರಕ್ಕಿಂತ ನಾಲ್ಕು ಓವರ್‌ಗಳಷ್ಟು ಹಾಗೂ ವೆಸ್ಟ್‌ಇಂಡೀಸ್ ತಂಡವು ಎರಡು ಓವರ್‌ಗಳಷ್ಟು ಹಿಂದಿತ್ತು. ಇದರ ಪರಿಣಾಮವಾಗಿ ಭಾರತ ತಂಡಕ್ಕೆ ಅದರ ಸಂಭಾವನೆಯ ಶೇಕಡಾ 20ರಷ್ಟು ಹಾಗೂ ವೆಸ್ಟ್‌ಇಂಡೀಸ್‌ಗೆ ಶೇ.10ರಷ್ಟು ದಂಡ ವಿಧಿಸಲಾಗಿದೆ.
ಉಭಯ ತಂಡಗಳ ನಾಯಕರು ದಂಡವನ್ನು ಸ್ವೀಕರಿಸಿದ ಕಾರಣ ಅಧಿಕೃತ ವಿಚಾರಣೆ ಇರುವುದಿಲ್ಲ.
ಮ್ಯಾಚ್ ರೆಫರಿಗಳ ಐಸಿಸಿ ಅಂತರ್‌ರಾಷ್ಟ್ರೀಯ ಪ್ಯಾನೆಲ್‌ನ ಪ್ರಕಾಶ್ ಭಟ್ ಈ ದಂಡಗಳನ್ನು ವಿಧಿಸಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿ 0-2 ಹಿನ್ನಡೆ ಕಂಡಿದ್ದ ವೆಸ್ಟ್‌ಇಂಡೀಸ್ ಕೊನೆಯ ಪಂದ್ಯವನ್ನು ಗೆದ್ದುಕೊಂಡು ಸಮಾಧಾನಪಟ್ಟುಕೊಂಡಿತ್ತು. ನಾಯಕ ಶಾಯ್ ಹೋಪ್(ಔಟಾಗದೆ 162)ನಾಯಕತ್ವದಲ್ಲಿ ಪ್ರವಾಸಿಗರು 352 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದರು.
ಹೋಪ್ ಏಕದಿನ ಇನಿಂಗ್ಸ್‌ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ ಮೊದಲ ವಿಕೆಟ್‌ಕೀಪರ್-ನಾಯಕನೆಂಬ ಕೀರ್ತಿಗೆ ಭಾಜನರಾಗಿದ್ದರು.