×
Ad

ಶ್ರೀಲಂಕಾ ವಿರುದ್ಧ ಭಾರತಕ್ಕೆ 'ಸೂಪ‌ರ್' ಗೆಲುವು

Update: 2025-09-27 07:44 IST

PC: x.com/airnewsalerts

ದುಬೈ: ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಏಷ್ಯ ಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ವಿಭಾಗದ ಕೊನೆಯ ಪಂದ್ಯದಲ್ಲಿ 'ಸೂಪರ್ ಓವರ್'ನಲ್ಲಿ ಜಯ ಸಾಧಿಸಿತು.

ಶುಕ್ರವಾರ ನಡೆದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಪಂದ್ಯವು ರೋಚಕ ರಸದೌತಣ ನೀಡಿತು. ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಶರ್ಮಾ ಅವರ ಮಿಂಚಿನ ಅರ್ಧಶತಕ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ಟೂರ್ನಿಯಲ್ಲಿ ಮೊದಲ ಸಲ ಭಾರತಕ್ಕೆ ಕಠಿಣ ಸವಾಲೊಡ್ಡಿತು. ಆರಂಭಿಕ ಬ್ಯಾಟರ್ ಪಥುಮ್ ನಿಸಾಂಕ ಅಮೋಘ ಶತಕ ಬಾರಿಸಿ ಭಾರತದ ಅಜೇಯ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಕುಸಾಲ ಪೆರೆರಾ ಅರ್ಧಶತಕ ಗಳಿಸಿದರು. ಆದರೂ ಭಾರತದ ಬೌಲರ್‌ಗಳ ಬೌಲರ್‌ ಗಳು ಪಂದ್ಯ 'ಟೈ' ಆಗಲು ಬೆವರು ಸುರಿಸಿದರು. ಲಂಕಾ 5 ವಿಕೆಟ್‌ ಗಳಿಗೆ 202 ರನ್ ಗಳಿಸಿತು.

ಸೂಪರ್ ಓವರ್ ನೀಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡಕ್ಕೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೇವಲ 2 ರನ್ ಬಿಟ್ಟುಕೊಟ್ಟರು. ಭಾರತದ ಸೂರ್ಯಕುಮಾರ್ ಯಾದವ್ ತಾವೆದುರಿಸಿದ ಮೊದಲ ಎಸೆತದಲ್ಲಿ 3 ರನ್ ಗಳಿಸಿ, ಭಾರತ ತಂಡಕ್ಕೆ ಸೂಪರ್ ಗೆಲುವು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News