×
Ad

2,000 ರನ್ ತಲುಪಿದ ದಕ್ಷಿಣ ಆಫ್ರಿಕಾದ ಹಿರಿಯ ಬ್ಯಾಟರ್ Temba Bavuma

Update: 2025-12-06 21:42 IST

ಟೆಂಬಾ ಬವುಮಾ | Photo Credit : ANI 

ವಿಶಾಖಪಟ್ಟಣ, ಡಿ.6: ಭಾರತ ವಿರುದ್ಧದ ಶನಿವಾರ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 2,000 ರನ್ ಮೈಲಿಗಲ್ಲು ತಲುಪುವ ಮೂಲಕ ಮಹತ್ವದ ಸಾಧನೆ ಮಾಡಿದರು. 35 ವರ್ಷ, 203 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಬವುಮಾ 53 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ವೇಗವಾಗಿ 2,000 ಏಕದಿನ ರನ್ ಗಳಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡು ಕ್ವಿಂಟನ್ ಡಿಕಾಕ್ ಸಾಧನೆ ಸರಿಗಟ್ಟಿದರು. ಹಾಶೀಂ ಅಮ್ಲ, ರಾಸ್ಸಿ ವಾನ್‌ಡರ್ ಡುಸೆನ್ ಹಾಗೂ ಗ್ಯಾರಿ ಕರ್ಸ್ಟನ್ ಕ್ರಮವಾಗಿ 40, 45 ಹಾಗೂ 50 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ರಾಸ್ಸಿ ವಾನ್‌ಡರ್ ಡುಸ್ಸೆನ್ 2,000 ರನ್ ಮೈಲಿಗಲ್ಲು ತಲುಪಿದ ದಕ್ಷಿಣ ಆಫ್ರಿಕಾದ ಎರಡನೇ ಹಿರಿಯ ಆಟಗಾರನಾಗಿದ್ದಾರೆ. ಡುಸೆನ್ 34 ವರ್ಷ ಹಾಗೂ 247 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News