ಸ್ವಿಸ್ ಓಪನ್ ಟೆನಿಸ್ ಟೂರ್ನಿ : ಸಿಟ್ಸಿಪಾಸ್ ಚಾಂಪಿಯನ್

Update: 2026-07-21 00:12 IST

ಜಿಸ್ಟಾಡ್, ಜು.20: ಸ್ವಿಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂನ ರಾಫೆಲ್ ರನ್ನು ಮೂರು ಸೆಟ್‌ಗ ಳಿಂದ ಮಣಿಸಿದ ಗ್ರೀಸ್ ಆಟಗಾರ ಸ್ಟೆಫನೋಸ್ ಸಿಟ್ಸಿಪಾಸ್ ಸುಮಾರು ಒಂದೂವರೆ ವರ್ಷಗಳ ನಂತರ ತನ್ನ ಮೊದಲ ಎಟಿಪಿ ಪ್ರಶಸ್ತಿ ಜಯಿಸಿದರು.

ರವಿವಾರ ನಡೆದ ಪಂದ್ಯದಲ್ಲಿ ಮಾಜಿ ವಿಶ್ವದ ನಂ.3ನೇ ಆಟಗಾರ ಸಿಟ್ಸಿಪಾಸ್, ರಾಫೆಲ್‌ರನ್ನು 6-4, 6-7(3), 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ತನ್ನ ವೃತ್ತಿಬದುಕಿನಲ್ಲಿ 13ನೇ ಟ್ರೋಫಿ ಜಯಿಸಿದರು. 2025ರ ಫೆಬ್ರವರಿಯ ನಂತರ ಮೊದಲ ಪ್ರಶಸ್ತಿ ಗೆದ್ದರು.

24ರ ವಯಸ್ಸಿನ ರಾಫೆಲ್ ಇದೇ ಮೊದಲ ಬಾರಿ ಎಟಿಪಿ ಟೂರ್ನಿಯಲ್ಲಿ ಫೈನಲ್ ಪಂದ್ಯವಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News