ಶ್ರೀಲಂಕಾದ ಪುರುಷರ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ವಿಕ್ರಂ ರಾಥೋರ್ ಆಯ್ಕೆ
Update: 2026-01-08 22:33 IST
PC: PTI
ಕೊಲಂಬೊ, ಜ.8: ಶ್ರೀಲಂಕಾದ ಪುರುಷರ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್‌ರನ್ನು ನೇಮಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ಗುರುವಾರ ಪ್ರಕಟಿಸಿದೆ.
ಸಲಹೆಗಾರನ ನೆಲೆಯಲ್ಲಿ ರಾಥೋರ್‌ರನ್ನು ನೇಮಿಸಲಾಗಿದೆ. 2026ರ ಪುರುಷರ ಟಿ-20 ವಿಶ್ವಕಪ್ ಟೂರ್ನಿಗೆ ತಂಡವನ್ನು ಸಿದ್ದಪಡಿಸುವತ್ತ ಹೆಚ್ಚಿನ ಗಮನ ನೀಡಲಾಗುವುದು ಎಂದು ಎಸ್‌ಎಲ್‌ಸಿ ತಿಳಿಸಿದೆ.
ಭಾರತದ ಮಾಜಿ ಆಟಗಾರನಾಗಿರುವ ರಾಥೋರ್ ಒಂದು ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯವನ್ನು ಪ್ರತಿನಿಧಿಸಿದ್ದಾರೆ. ಜ.18ರಂದು ರಾಥೋರ್ ತಮ್ಮ ಕರ್ತವ್ಯವನ್ನು ಆರಂಭಿಸಲಿದ್ದು, ಮಾರ್ಚ್ 10ರ ತನಕ ಇರಲಿದ್ದಾರೆ.
ರಾಥೋರ್ ಈ ಹಿಂದೆ 2019ರಿಂದ 2014ರ ತನಕ ಭಾರತ ತಂಡದ ಎಲ್ಲ ಮಾದರಿಯ ಕ್ರಿಕೆಟಿಗನ ಬ್ಯಾಟಿಂಗ್ ಕೋಚ್ ಆಗಿದ್ದರು. ಸದ್ಯ ಅವರು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.