×
Ad

ವಿರಾಟ್ ಕೊಹ್ಲಿ, ಬಾಬರ್ ಆಝಂ ದಾಖಲೆ ಮುರಿದ ಋತುರಾಜ್ ಗಾಯಕ್ವಾಡ್

Update: 2026-01-08 22:37 IST

PTI Photo/Kunal Patil

ಮುಂಬೈ, ಜ.8: ವಿಜಯ್ ಹಝಾರೆ ಟ್ರೋಫಿಯಲ್ಲಿ 131 ಎಸೆತಗಳಲ್ಲಿ 134 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಇನಿಂಗ್ಸ್‌ವೊಂದನ್ನು ಆಡಿದ್ದಾರೆ. ಈ ಮೂಲಕ ಹಲವು ದಾಖಲೆ ಪುಡಿಗಟ್ಟಿ ಇತಿಹಾಸ ನಿರ್ಮಿಸಿದರು.

ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತದ ಬ್ಯಾಟರ್‌ಗಳ ಪೈಕಿ ಒಬ್ಬರಾಗಿರುವ ಗಾಯಕ್ವಾಡ್ ಕೇವಲ 57 ಇನಿಂಗ್ಸ್‌ಗಳಲ್ಲಿ 15ನೇ ಶತಕವನ್ನು ಗಳಿಸಿ ವಿಜಯ್ ಹಝಾರೆ ಟ್ರೋಫಿಯ ಇತಿಹಾಸದಲ್ಲಿ ಗರಿಷ್ಠ ಶತಕ ಗಳಿಸಿದ ಅಂಕಿತ್ ಬಾವ್ನೆ ದಾಖಲೆಯನ್ನು ಸರಿಗಟ್ಟಿದ್ದಾರೆ.

ವೃತ್ತಿಪರ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ವೇಗವಾಗಿ 20 ಶತಕಗಳನ್ನು ಸಿಡಿಸಿದ ಆಟಗಾರನಾಗಿರುವ ಗಾಯಕ್ವಾಡ್ ಕೇವಲ 95 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಯಾವ ಬ್ಯಾಟರ್ ಕೂಡ 100ಕ್ಕಿಂ ತ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿಲ್ಲ.ಈ ಹಿಂದೆ ಮಯಾಂಕ್ ಅಗರ್ವಾಲ್ ಹಾಗೂ ಖುರ‌್ರಂ ಮಂಝೂರ್ ತಲಾ 129 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಂ ಕ್ರಮವಾಗಿ 131 ಹಾಗೂ 143 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.

ಗೋವಾ ವಿರುದ್ಧ ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಗಾಯಕ್ವಾಡ್ 8 ಬೌಂಡರಿ, 6 ಸಿಕ್ಸರ್‌ಗಳನ್ನ್ನು ಸಿಡಿಸಿ ಮಹಾರಾಷ್ಟ್ರ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 249 ರನ್ ಗಳಿಸಲು ನೆರವಾದರು. ಈ ಪಂದ್ಯವನ್ನು ಮಹಾರಾಷ್ಟ್ರ ತಂಡವು ಕೇವಲ ಐದು ರನ್‌ನಿಂದ ಗೆದ್ದುಕೊಂಡಿದೆ. ಗೋವಾ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 244 ರನ್ ಗಳಿಸಿದೆ. ಲಲಿತ್ ಯಾದವ್ ಔಟಾಗದೆ 57 ರನ್(67 ಎಸೆತ)ಗಳಿಸಿದೆ. ಪ್ರಶಾಂತ್ ಸೋಲಂಕಿ(4-56)ಯಶಸ್ವಿ ಬೌಲರ್ ಎನಿಸಿಕೊಂಡರು.

ಈ ವೇಳೆ ಗಾಯಕ್ವಾಡ್ ಅವರು ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ವೇಗವಾಗಿ 5,000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News