×
Ad

ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದ ವಿರಾಟ್ ಕೊಹ್ಲಿ

Update: 2023-07-15 11:09 IST

ಡೊಮಿನಿಕಾ: ಇತಿಹಾಸದಲ್ಲಿಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪುವಲ್ಲಿ ಯಶಸ್ವಿಯಾದರು, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ 2ನೇ ದಿನವಾದ ಗುರುವಾರ ಕೊಹ್ಲಿ ಈ ಸಾಧನೆ ಮಾಡಿದರು.

ಅಜೇಯ 36 ರನ್ ಗಳಿಸಿದ ತಕ್ಷಣ ಕೊಹ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಗ್ರ 5 ಟೆಸ್ಟ್ ಬ್ಯಾಟರ್ ಆಗಿ ಭಡ್ತಿ ಪಡೆದರು. ಈ ವೇಳೆ ಅವರು ಕ್ರಿಕೆಟಿನ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ (8,503) ಅವರನ್ನು ಹಿಂದಿಕ್ಕಿದರು.

ಕೊಹ್ಲಿ ಅವರು ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಟ ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನಿಲ್ ಗವಾಸ್ಕರ್ (10,122) ಹಾಗೂ ವಿವಿಎಸ್ ಲಕ್ಷ್ಮಣ್ (8,781) ನಂತರದ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News