ನಾಲ್ಕು ವರ್ಷಗಳ ಬಳಿಕ ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (Photo: PTI)
ಹೊಸದಿಲ್ಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ವೈಭವಕ್ಕೆ ಮರಳಿದ್ದು, ನಾಲ್ಕು ವರ್ಷಗಳ ಬಳಿಕ ಅವರು ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬುಧವಾರ ಐಸಿಸಿ ಪ್ರಕಟಿಸಿರುವ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನಕ್ಕೇರಿರುವುದು ದೃಢಪಟ್ಟಿದೆ.
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಭರ್ಜರಿ ಅರ್ಧಶತಕ ಬಾರಿಸಿದ ನಂತರ ರ‍್ಯಾಂಕಿಂಗ್‌ನಲ್ಲಿ ಬದಲಾವಣೆಯಾಗಿದೆ.
ವಿರಾಟ್ ಕೊಹ್ಲಿ 12 ರೇಟಿಂಗ್ ಪಾಯಿಂಟ್ ಗಳನ್ನು ಪಡೆದಿದ್ದು, ಅವರ ಒಟ್ಟಾರೆ ರೇಟಿಂಗ್ ಪಾಯಿಂಟ್ 785ಕ್ಕೆ ಏರಿಕೆಯಾಗಿದೆ. ಇದೇ ವೇಳೆ ರೋಹಿತ್ ಶರ್ಮಾ ಅವರ ಆರು ರೇಟಿಂಗ್ ಪಾಯಿಂಟ್ ಇಳಿಕೆಯಾಗಿದ್ದು, ಅವರ ಒಟ್ಟಾರೆ ರೇಟಿಂಗ್ ಪಾಯಿಂಟ್ 781ರಿಂದ 775ಕ್ಕೆ ಕುಸಿದಿದೆ. ಇದೇ ವೇಳೆ ನ್ಯೂಝಿಲೆಂಡ್ ನ ಆಲ್ ರೌಂಡರ್ ಡೇರಿಲ್ ಮಿಚೆಲ್ ಇದೇ ಪ್ರಥಮ ಬಾರಿಗೆ ಎರಡನೆ ಸ್ಥಾನಕ್ಕೇರಿದ್ದಾರೆ.
ಉಳಿದಂತೆ ಅಫ್ಘಾನಿಸ್ತಾನದ ಬ್ಯಾಟರ್ ಇಬ್ರಾಹಿಂ ಝದ್ರಾನ್ 764 ರೇಟಿಂಗ್ಸ್ ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಶುಭ್ ಮನ್ ಗಿಲ್ 725 ರೇಟಿಂಗ್ಸ್ ನೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.