×
Ad

ಆಸ್ಟ್ರೇಲಿಯದ ಆಟಗಾರರಿಗೆ ಕ್ರಿಸ್ಮಸ್ ಉಡುಗೊರೆ ನೀಡಿದ ಪಾಕಿಸ್ತಾನದ ಆಟಗಾರರು

Update: 2023-12-25 23:24 IST

Photo: twitter.com/TheRealPCB

ಮೆಲ್ಬೋರ್ನ್: ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಆಸ್ಟ್ರೇಲಿಯದ ಪ್ರಾಕ್ಟೀಸ್ ನೆಟ್ಗೆ ಭೇಟಿ ನೀಡಿ, ಆಸ್ಟ್ರೇಲಿಯದ ಆಟಗಾರರಿಗೆ ಹಾಗೂ ಅವರ ಕುಟುಂಬದವರಿಗೆ ಉಡುಗೊರೆ ನೀಡಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು.

ಉಭಯ ತಂಡಗಳು ಮಂಗಳವಾರ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗೆ ತಯಾರಿ ನಡೆಸುತ್ತಿವೆ.

ಪಾಕಿಸ್ತಾನದ ಆಟಗಾರರು ಮಕ್ಕಳಿಗೆ ಉಡುಗೊರೆಯ ಬುಟ್ಟಿಗಳು ಹಾಗೂ ಸಿಹಿತಿಂಡಿಗಳನ್ನು ಒಯ್ಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ನೂತನ ನಾಯಕ ಶಾನ್ ಮಸೂದ್ ಈ ಹೃದಯಸ್ಪರ್ಶಿ ನಡವಳಿಕೆಯ ನೇತೃತ್ವವಹಿಸಿದ್ದು, ಮಾಜಿ ನಾಯಕ ಬಾಬರ್ ಆಝಮ್ ಹಾಗೂ ಪಾಕಿಸ್ತಾನದ ಕೋಚಿಂಗ್ ಸಿಬ್ಬಂದಿ ಇದಕ್ಕೆ ಸಾಥ್ ನೀಡಿದರು.

ಪಾಕಿಸ್ತಾನ ಆಟಗಾರರು ಮಕ್ಕಳಿಗೆ ಕೊಟ್ಟ ಮೇರಿ ಕ್ರಿಸ್ಮಸ್ ಉಡುಗೊರೆಗಳು, ಲಾಲಿಪಾಪ್ಗಳು ಅದ್ಭುತವಾಗಿದ್ದವು. ಪಾಕಿಸ್ತಾನ ತಂಡದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಒಂದೆರಡು ವರ್ಷಗಳ ಹಿಂದೆ ನಡೆದ ಆ ಪ್ರವಾಸ ನಿಜಕ್ಕೂ ವಿಶೇಷವಾಗಿತ್ತು. ನಮ್ಮ ಕುರಿತು ಅವರ ಯೋಚನೆ ಚಿಂತನಶೀಲವಾಗಿದೆ ಎಂದು ಇಎಸ್ಪಿಎನ್ ಆಸ್ಟ್ರೇಲಿಯಕ್ಕೆ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಪಾಕಿಸ್ತಾನ ತಂಡ ಪರ್ತ್ ನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯವನ್ನು 360 ರನ್ ಗಳಿಂದ ಹೀನಾಯವಾಗಿ ಸೋತಿದೆ. ಆಡುವ ಹನ್ನೊಂದರ ಕಿರು ಪಟ್ಟಿಯಲ್ಲಿದ್ದ ಸರ್ಫರಾಝ್ ಅಹ್ಮದ್ ರನ್ನು ಕೈಬಿಡಲಾಗಿದೆ. ಮಂಗಳವಾರ ಎಂಸಿಜಿಯಲ್ಲಿ ಟಾಸ್ಗೆ ಮೊದಲು ಆಡುವ ಬಳಗವನ್ನು ನಿರ್ಧರಿಸಲಾಗುತ್ತದೆ.

ಆಸ್ಟ್ರೇಲಿಯ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News